ಅಪರಾಧ ರಾಜಕೀಯ ಸುದ್ದಿ

ಗೋದಾಮಿನಲ್ಲಿ ಅನ್ನಭಾಗ್ಯ ಅಕ್ಕಿ ಕಳ್ಳತನ: ಬಿಜೆಪಿ ಮುಖಂಡ ಅರೆಸ್ಟ್

Share It

ಯಾದಗಿರಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನು ಕಲಬುರಗಿಯಲ್ಲಿ ಶಹಾಪುರ ಪೊಲೀಸರು ಮಂಗಳವಾರ ಸಂಜೆ 7 ಗಂಟೆಗೆ ಬಂಧಿಸಿದ್ದಾರೆ.

ಟಿ.ಎ.ಪಿ‌.ಸಿ.ಎಮ್.ಸಿ ಗೋದಾಮಿನಲ್ಲಿ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಮಣಿಕಂಠ ರಾಠೋಡನನ್ನು ಹುಡುಕಾಟದಲ್ಲಿದ್ದ ಶಹಾಪುರ ಪೊಲೀಸರು ಇಂದು‌ ಕಲಬುರಗಿಯಲ್ಲಿ ಬಂಧಿಸಿದ್ದಾರೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆಹಾರ ಇಲಾಖೆ ಉಪ ನಿರ್ದೇಶಕ ಭೀಮರಾಯ ಮಸಾಲಿ ಅಕ್ಕಿ ನಾಪತ್ತೆಯಾದ ಬಗ್ಗೆ ಶಹಾಪುರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಯಾದಗಿರಿ ಜಿಲ್ಲೆಯ ಶಹಾಪುರನ TAPCMC ಗೋದಾಮಿನಲ್ಲಿ ಸಂಗ್ರಹವಾದ ಅನ್ನಭಾಗ್ಯ ಅಕ್ಕಿಯನ್ನು ಗೋದಾಮಿನಲ್ಲಿ ಸಂಗ್ರಹಿಸಿದ 6077 ಕ್ವಿಂಟಾಲ್ ಅಕ್ಕಿ ಅಂದಾಜು 2.6 ಕೋಟಿ ಮೌಲ್ಯದ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನು ಶಹಾಪುರ ಪಿಎಸ್ಐ ಎಸ್.ಎಂ ಪಾಟೀಲ ನೇತೃತ್ವದಲ್ಲಿ ಬಂಧಿಸಲಾಗಿದೆ.

ಮಣಿಕಂಠ ರಾಠೋಡ ಸಹೋದರ ರಾಜು ರಾಠೋಡಗೆ ಸೇರಿದ ಗುರುಮಠಕಲ್ ಪಟ್ಟಣದ ಹೊರಭಾಗದ ಶ್ರೀಲಕ್ಷ್ಮಿ ತಿಮ್ಮಪ್ಪ ರೈಸ್ ಮಿಲ್ ಮೇಲೆ ಶಹಾಪುರ ಪೊಲೀಸರು ದಾಳಿ ಮಾಡಿ 700 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ್ದರು.

ನವೆಂಬರ್ ತಿಂಗಳು ಪ್ರಕರಣ ದಾಖಲಿಸಿಕೊಂಡು ಅಕ್ಕಿ ನಾಪತ್ತೆ ಬಗ್ಗೆ ತನಿಖೆಯಲ್ಲಿದ್ದ ಶಹಾಪುರ ಪೊಲೀಸರು‌ ಮಣಿಕಠ ರಾಠೋಡನನ್ನು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರು. ಆದರೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪೊಲೀಸರು ಮಣಿಕಂಠನನ್ನು‌ ಮಂಗಳವಾರ ಸಂಜೆ 7 ಗಂಟೆಗೆ ಕಲಬುರಗಿಯಲ್ಲಿ ಬಂಧಿಸಿದ್ದಾರೆ.

ಅಕ್ಕಿ ನಾಪತ್ತೆಯಲ್ಲಿ ಮಣಿಕಂಠ ರಾಠೋಡ ಭಾಗಿಯಾಗಿರುವ ಮಾಹಿತಿ ಹಿನ್ನಲೆ ಮಣಿಕಂಠ ರಾಠೋಡಗಾಗಿ ಶೋಧ ನಡೆಸುತ್ತಿದ್ದ ಶಹಾಪುರ ಪೊಲೀಸರು ಮಂಗಳವಾರ ಸಂಜೆ 7 ಗಂಟೆಗೆ ಮಣಿಕಂಠನನ್ನು ವಶಕ್ಕೆ ಪಡೆದರು.


Share It

You cannot copy content of this page