ಬೆಂಗಳೂರು: ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿ ತಲೆಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ.
ಬೆಂಗಳೂರು ಪೂರ್ವ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿ 15 ಕೋಟಿ ಮೌಲ್ಯದ ಭೂಮಿ ಕಬಳಿಸಿರುವ ಆರೋಪವನ್ನು ಆಶಾಲತಾ ಎಂಬ ಮಹಿಳೆ ಮಾಡಿದ್ದು, ರಾಜೀವ್ ಗೌಡ ವಿರುದ್ಧ ಆಕ್ರೋಶ ಹಿರಹಾಕಿದ್ದಾರೆ.
1.8 ಗುಂಟೆ ಭೂಮಿಯನ್ನು 2013 ರಲ್ಲಿ ಜಿಪಿಎ ಮೂಲಕ ರಾಜೀವ್ ಗೌಡ ಬರೆಸಿಕೊಂಡಿದ್ದರು. ಜಮೀನನ್ನು 1.45 ಕೋಟಿ ರುಪಾಯಿಗೆ ಜಿಪಿಎ ಮಾಡಿಕೊಡಲಾಗಿತ್ತು. ಆದರೆ, ರಾಜೀವ್ ಗೌಡ ಹಣ ಕೊಡದೆ ಸತಾಯಿಸಿದ ಕಾರಣಕ್ಕೆ ಜಿಪಿಎ ಕ್ಯಾನ್ಸಲ್ ಆಗಿತ್ತು.
ಪ್ರಸ್ತುತ ಆ ಭೂಮಿ 15 ಕೋಟಿ ರು.ಬೆಲೆಬಾಳುವ ಜಮೀನು ಆಗಿದ್ದು, ರಾಜೀವ್ ಗೌಡ ಭೂಮಿ ನನ್ನದೆ ಎಂದು ಕಬಳಿಕೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

