ಬೆಂಗಳೂರು: ಕೊಲ್ಲಿಯಲ್ಲಿನ ಯುದ್ಧದ ಪರಿಸ್ಥಿತಿಯ ನಡುವೆಯೂ 47 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಯನ್ನು ಹೊತ್ತ ಜಗ್ ವಸಂತ್ ಹಡಗು ಭಾರತಕ್ಕೆ ಆಗಮಿಸಿದೆ.
ಗುಜರಾತ್ನ ಜಮ್ನಗರದ ವಡಿನಾರ್ ಟರ್ಮಿನಲ್ಗೆ ಹಡಗು ಆಗಮಿಸಿದೆ ಎಂದು ದೀನದಯಾಳ್ ಪೋರ್ಟ್ ಅಥಾರಿಟಿ ಸ್ಪಷ್ಟಪಡಿಸಿದೆ. ಈ ಹಡಗು 47 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿಯನ್ನು ಹೊತ್ತುತಂದಿದೆ.

ಹರ್ಮಾಜ್ ಜಲಸಂಧಿಯಲ್ಲಿನ ಉಧ್ವಿಗ್ನತೆಯ ನಡುವೆ ಭಾರತ ಸರಕಾರ ನಡೆಸಿದ ಮಾತುಕತೆಯ ಫಲವಾಗಿ ಇರಾನ್ ಕೆಲವು ಹಡಗುಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದು, ಅದರ ಭಾಗವಾಗಿ ವಸಂತ್ ಹಡಗು ಭಾರತಕ್ಕೆ ಆಗಮಿಸಿದೆ.

