ಮಳೆಗಾಲ ಬಂತೆಂದರೆ ಸಾಕು. ಸೊಳ್ಳೆಗಳ ಕಾಟವು ಹೆಚ್ಚಾಗುತ್ತದೆ. ಸೊಳ್ಳೆಗಳು ಕಡಿದಾಗ ಕೆಲವೊಮ್ಮೆ ನಮ್ಮ ಚರ್ಮದಲ್ಲಿ ತುರಿಕೆಯ ಅನುಭವವಾಗುತ್ತದೆ. ಅಥವಾ ಕೆಲ ವೇಳೆ ಸೊಳ್ಳೆ ಕಚ್ಚಿದ ಜಾಗದಲ್ಲಿ ಊತ ಬರುವುದುಂಟು. ಇಂತಹ ಸಂದರ್ಭದಲ್ಲಿ ತುರಿಕೆಯನ್ನು ಕಡಿಮೆ ಮಾಡಲು ಕೆಲ ಮನೆ ಮದ್ದುಗಳನ್ನು ಬಳಸಬಹುದಾಗಿದೆ.
ನಾವು ಸೊಳ್ಳೆಗಳಿಂದ ರಕ್ಷಣೆ ಪಡೆಯಲು ವಿವಿಧ ರೀತಿಯ ರಾಸಾಯನಿಕ ಹಾಗೂ ಹಾನಿಕಾರಕ ವಸ್ತುಗಳನ್ನು ಬಳಸುತ್ತೇವೆ. ಇದರಿಂದ ನಮ್ಮ ಆರೋಗ್ಯಕ್ಕೂ ಹಾನಿಯಾಗುತ್ತದೆ. ಆದರೇ ಕೆಳಗಿನ ಮನೆ ಮದ್ದುಗಳನ್ನು ಬಳಸುವುದರಿಂದ ಆರೋಗ್ಯದ ಜೊತೆಗೆ ಸೊಳ್ಳೆಯಿಂದಲೂ ರಕ್ಷಣೆ ಪಡೆಯಬುದು.
ಸೊಳ್ಳೆ ಕಡಿತದಿಂದ ಪಾರಾಗಲು ಮಾಡಬೇಕಾದ ಕೆಲಸವೆಂದರೆ :-
ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಕುಟ್ಟಿ ಮಿಶ್ರಣ ಮಾಡಿಕೊಂಡು ಕೈ ಕಾಲುಗಳಿಗೆ ಲೇಪನ ಮಾಡಿಕೊಳ್ಳಬಹುದು.
ಸೊಳ್ಳೆ ಕಚ್ಚಿದ ಜಾಗಕ್ಕೆ ಜೇನು ತುಪ್ಪವನ್ನು ಹಚ್ಚುವುದು. ಹತ್ತು ನಿಮಿಷಗಳಲ್ಲಿ ತುರಿಕೆ ಕಡಿಮೆಯಾಗುತ್ತದೆ.
ಸೊಳ್ಳೆಯು ಕಚ್ಚಿದ ಜಾಗವೂ ತುಂಬ ಉರಿಯಾಲು ಆರಂಭಿಸಿದರೆ, ಜೇನು ತುಪ್ಪದ ಜೊತೆಗೆ ಐಸ್ ಕ್ಯೂಬ್ ಅನ್ನು ಬಳಸುವುದು.
ಕೈ ಕಾಲುಗಳಿಗೆ ಎಣ್ಣೆಯನ್ನು ಹಚ್ಚಿಕೊಳ್ಳುವುದು.
ಆಲೋವೆರಾದ ಜೆಲ್ ಅನ್ನು ಸೊಳ್ಳೆ ಕಚ್ಚಿದ ಜಾಗಕ್ಕೆ ಲೇಪಿಸುವುದರಿಂದ ತುರಿಕೆ ಮತ್ತು ನೋವು ಬೇಗ ಗುಣವಾಗುತ್ತದೆ.