ಮಳೆಗಾಲದಲ್ಲಿ ಸಾಮಾನ್ಯವಾಗಿ ಸೋಂಕುಗಳು ಹರಡುವುದು ಹೆಚ್ಚು. ಅದರಲ್ಲಿಯೂ ಜ್ವರ ಕೆಮ್ಮು ಶೀತ ಇವುಗಳು ಸರ್ವೇ ಸಾಮಾನ್ಯವಾಗಿ ಕಾಡುವ ಸೋಂಕುಗಳು. ನಮ್ಮ ಮನೆಯಲ್ಲಿಯೇ ದೊರೆಯುವ ಅನೇಕ ಪದಾರ್ಥಗಳು ವಿವಿಧ ಸಮಸ್ಯೆಗಳಿಗೆ ರಾಮಬಾಣವಾಗಿರುತ್ತವೆ. ಅಂತಹ ವಸ್ತುಗಳ ಪೈಕಿ ಶುಂಠಿ ಸಹ ಒಂದಾಗಿದೆ.
ಶುಂಠಿಯು ಅಡುಗೆಯಲ್ಲಿಯೂ ಒಳ್ಳೆಯ ರುಚಿಯನ್ನು ನೀಡುತ್ತದೆ. ನಮ್ಮ ಜೀರ್ಣ ಕ್ರಿಯೆಗೆ ಸಹಾಯವನ್ನು ಮಾಡುತ್ತದೆ. ಇನ್ನು ಏನೆಲ್ಲಾ ಉಪಯೋಗಗಳು ಇವೆ ಎಂದು ನೋಡುತ್ತ ಹೋಗೋಣ ಬನ್ನಿ.
ರೋಗ ನಿರೋಧಕ ಶಕ್ತಿ
ಶುಂಠಿಯಲ್ಲಿ ಸಾಮಾನ್ಯವಾಗಿ ಜಿಂಜರಾಲ್ ಮತ್ತು ಶೋಗಾಲ್‌ನಂಥ ಎರಡು ಅಂಶಗಳಿರುತ್ತವೆ. ನೆಗಡಿ, ಕೆಮ್ಮು, ಕಫ, ಜ್ವರ ಇದ್ದಾಗ ಶುಂಠಿಯ ಕಷಾಯವನ್ನು ಸೇವಿಸುವುದು ಆರೋಗ್ಯಕರ. ಮಳೆಗಾಲದಲ್ಲಿ ಆಗಾಗ ಶುಂಠಿ ಕಷಾಯ ಸೇವನೆ ಒಳ್ಳೆಯದು.
ಪಚನಕಾರಿ
ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ಜಠರದಲ್ಲಿ ಹೆಚ್ಚಿನ ಸಮಯ ನಾವು ತಿಂದ ಆಹಾರ ಜೀರ್ಣವಾಗದೇ ಉಳಿಯದಂತೆ ಮಾಡುತ್ತದೆ. ಇದರಿಂದಾಗಿ ಮಲ ಬದ್ಧತೆ, ಹೊಟ್ಟೆಯ ಊತ ಎರಡು ಕಡಿಮೆಯಾಗುತ್ತದೆ. ಖಾಲಿ ಹೊಟ್ಟೆಗೆ ಶುಂಠಿ ಕಷಾಯ ಸೇವಿಸುವು ಒಳ್ಳೆಯ ಹವ್ಯಾಸ.
ಉತ್ಕರ್ಷಣ ವಿರೋಧಿ
ಶುಂಠಿಯಲ್ಲಿ ಅನೇಕ ಉತ್ಕರ್ಷಣ ಅಂಶ ಗಳಿವೆ. ಗಂಟಲು ನೋವು, ಈಗೆ ದೇಹದ ನಾನಾ ಭಾಗಗಳಲ್ಲಿ ಉರಿ ಮತ್ತು ಊತದ ಅನುಭವ ವಾಗುತ್ತದೆ. ಇದರಿಂದ ಪರಿಹಾರ ಪಡೆಯಲು ಶುಂಠಿ ಸಹಕಾರಿಯಾಗಿದೆ.
ಗರ್ಭಿಣಿಯರಿಗೆ ಮತ್ತು ಮಧು ಮೇಹಿಗಳಿಗೆ
ಬೆಳಗ್ಗಿನ ವಾಂತಿ ಆಗು ವಾಕರಿಕೆ ಯಿಂದ ಮುಕ್ತಿ ಪಡೆಯಲು ಗರ್ಭಿಣಿಯರಿಗೆ ಸಹಾಯವಾಗುತ್ತದೆ. ಕಷಾಯ ಅಥವಾ ಒಂದು ತುಂಡು ಶುಂಠಿಯನ್ನು ಬಾಯಲ್ಲಿ ಅಕಿಕೊಂಡರೆ ಸಾಕು. ಮಧುಮೇಹಿ ಗಳಿಗೆ ಅವರ ದೇಹದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ರಕ್ತ ಪರಿಚಲನೆಗೆ ಸಹಕಾರಿಯಾಗಿದೆ.
ತೂಕ ಕಡಿಮೆ ಮಾಡುತ್ತದೆ.
ನಾವು ತಿಂದ ಆಹಾರವನ್ನು ಸರಿಯಾದ ಸಮಯಕ್ಕೆ ಜೀರ್ಣ ವಾಗಲು ಸಹಾಯ ಮಾಡುತ್ತದೆ. ಅಲ್ಲದೆ ಬೆಳಗಿನ ವೇಳೆ ಶುಂಠಿಯ ಕಷಾಯ ಸೇವನೆ ಉತ್ತಮ ಆರೋಗ್ಯದ ಗುಟ್ಟು ಎಂದು ಹೇಳಬಹುದು. ಅನಗತ್ಯ ಹಸಿವನ್ನು ಕಡಿಮೆ ಮಾಡುತ್ತದೆ.