ಬೆಂಗಳೂರು : ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 187 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ಕರ್ನಾಟಕದ ಹಲವೆಡೆ ದಾಳಿ ನಡೆಸಿ ಅನೇಕ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ತಡರಾತ್ರಿವರೆಗೂ ಶೋಧಕಾರ್ಯ ನಡೆಸಿದ್ದರು.
ಮಾಜಿ ಸಚಿವ ಬಿ.ನಾಗೇಂದ್ರ ಪಿಎ ಹರೀಶ್‌ನನ್ನು ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದು ನಂತರ ರಾತ್ರಿ ಬಿಡುಗಡೆ ಮಾಡಿದ್ದರು.
ಬಂಧನಕ್ಕೊಳಗಾವರ ವಿವರ:
- ಸತ್ಯನಾರಾಯಣ, ಎಫ್ಎಫ್ಸಿಸಿಎಲ್ ಅಧ್ಯಕ್ಷ
2.ಸತ್ಯನಾರಾಯಣ ವರ್ಮಾ
3.ಚಂದ್ರಮೋಹನ್
4.ಶ್ರೀನಿವಾಸ್-ಮಧ್ಯವರ್ತಿ
5.ಜಗದೀಶ್-ಮಧ್ಯವರ್ತಿ
6.ಜೆಜೆ ಪದ್ಮನಾಭ್-ವಾಲ್ಮೀಕಿ ನಿಗಮದ ಹಿಂದಿನ ವ್ಯವಸ್ಥಾಪಕ, ನಿರ್ದೇಶಕ (ಎಂ.ಡಿ)
7.ಪರಶುರಾಮ ದುರುಗಣ್ಣವರ, ನಿಗಮದ ಹಿಂದಿನ ಲೆಕ್ಕಾಧಿಕಾರಿ
8.ನೆಕ್ಕಂಟಿ ನಾಗರಾಜ್, ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ
9.ನಾಗೇಶ್ವರ ರಾವ್, ಮಾಜಿ ಸಚಿವ ನಾಗೇಂದ್ರ ಸಂಬಂಧಿ
10.ಸಾಯಿ ತೇಜ, ಸತ್ಯನಾರಾಯಣ ವರ್ಮಾ ಸಹಚರ
- ತೇಜ ತಮ್ಮಯ್ಯ
ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡಿ ಈವರೆಗೆ
35 ಕೋಟಿ ರೂ. ಜಪ್ತಿ ಮಾಡಿದೆ.
ಎಸ್ಐಟಿ ಇದುವರೆಗೂ ಒಟ್ಟು 35 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಚಿನ್ನಾಭರಣ ಹಾಗೂ ಬ್ಯಾಂಕ್‌ಗಳಲ್ಲಿದ್ದ ಹಣ ಜಪ್ತಿ ಮಾಡಿದೆ.
ಯೂನಿಯನ್ ಬ್ಯಾಂಕಿನ ಕೆಲ ಹಿರಿಯ ಅಧಿಕಾರಿಗಳು ಈ ವಾಲ್ಮೀಕಿ ನಿಗಮದ ಅವ್ಯವಹಾರದಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಎಸ್ಐಟಿ ತನಿಖೆ ವೇಳೆ ಸಿದ್ಧವಾಗಿದ್ದ ಆರೋಪಿ ಸ್ಥಾನದಲ್ಲಿರುವ ಬ್ಯಾಂಕ್ ಸಿಬ್ಬಂದಿಗಳ ಪಟ್ಟಿ ಇಲ್ಲಿದೆ. ಇವರೆಲ್ಲ ಸದ್ಯ ತಲೆಮರೆಸಿಕೊಂಡಿದ್ದಾರೆ.
1.ಮನಮೆಕಲೈ, ಎಂಡಿ, ಸಿಇಓ, ಯೂನಿಯನ್ ಬ್ಯಾಂಕ್ ಅಪ್ ಇಂಡಿಯಾ.
2.ನಿತೇಶ್ ರಂಜನ್, ನಿರ್ದೇಶಕ ಯೂನಿಯನ್ ಬ್ಯಾಂಕ್ ಅಪ್ ಇಂಡಿಯಾ.
3.ರಾಮಸುಬ್ರಮಣ್ಯ ನಿರ್ದೇಶಕ, ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾ.
4.ಸಂಜಯ್ ರುದ್ರ, ನಿರ್ದೇಶಕ, ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾ.
5.ಪಂಕಜ್ ದ್ವಿವೇದಿ, ನಿರ್ದೇಶಕ ಯೂನಿಯನ್ ಬ್ಯಾಂಕ್ ಅಪ್ ಇಂಡಿಯಾ.
6.ಸುಚಿ ಸ್ಮಿತಾ, ಮ್ಯಾನೇಜರ್ ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾ.
ಈ 6 ಮಂದಿ ಅಷ್ಟೇ ಅಲ್ಲದೆ, ಡೆಪ್ಯೂಟಿ ಬ್ರಾಂಚ್ ಹೆಡ್ ದೀಪಾ ಹಾಗೂ ಕ್ರೆಡಿಟ್ ಆಫೀಸರ್ ಕೃಷ್ಣಮೂರ್ತಿ ಎಂಬುವವರ ಹೆಸರೂ ಕೂಡ ಸಿಬಿಐ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.
