ಕಲಬುರಗಿ
ಮಾಡಿದವರ ಪಾಪ ಆಡಿದವರ ಬಾಯಿಲ್ಲೇಕ ನಮ್ಮ ಬಾಯಲ್ಲಿ ಅವರ ಬಗ್ಗೆ ಮಾತು ಬೇಡ. ಅಭಿವೃದ್ಧಿ ಬಗ್ಗೆ ಕೇಳಿ ನಾವು ಮಾತನಾಡ್ತೆವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಹೇಳಿದರು.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೂರಜ್ ರೇವಣ್ಣ ವಿರುದ್ದ ಲೈಂಗಿಕ ಕಿರುಕುಳ ಆರೋಪ ವಿಚಾರದ ಕುರಿತು ಪ್ರತಿಕ್ರಿಯಿಸಲು ಅಲ್ಲಗಳೆದರು. ನಾನು ಪ್ರಿಯಾಂಕ್ ಖರ್ಗೆ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತೆವೆ. ನಾವು ತಪ್ಪು ಮಾಡಿದ್ರೆ ನಮ್ಮ ಬಗ್ಗೆ ಸುದ್ದಿ ಮಾಡಿ ನಾವು ತಿದ್ದಿಕೊಳ್ಳುತ್ತೆವೆ. ಅದು ಬಿಟ್ಟು ರಾಜಕಾರಣ ಬಗ್ಗೆ ನಾವು ಮಾತನಾಡಲ್ಲ ಎಂದರು.
ಡಿಸಿಎಂ ಹುದ್ದೆ ಹೆಚ್ಚಳ ಕುರಿತು.
ಮತ್ತೆ ಹೆಚ್ಚುವರಿ ಡಿಸಿಎಂ ಸೃಷ್ಡಿ ಬಗ್ಗೆ ಚರ್ಚೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾವ್ಯಾರು ಡಿಸಿಎಂ ಆಕಾಂಕ್ಷಿಗಳಲ್ಲ. ನಮ್ಮಲ್ಲಿ ಹೈಕಮಾಂಡ್ ಹತ್ತಿರ ಹೇಳೋ ಅವಕಾಶವಿದೆ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಉಂಡು ಮಲಗಿದ್ರು..!
ಕಲಬುರಗಿ ಜಯದೇವ ಆಸ್ಪತ್ರೆಯಲ್ಲಿ ನೀರಿಲ್ಲದೇ ಶಸ್ತ್ರ ಚಿಕಿತ್ಸೆ ಸ್ಥಗಿತ ಹಿನ್ನಲೆ ಆರ್.ಅಶೋಕ ಭೇಟಿ ವಿಚಾರದ ಕುರಿತು ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಅಶೋಕ ಅವರು ಈಗ ಆಕ್ಟಿವ್ ಆಗಿದಾರೆ. ಇಲ್ಲಿಯವರೆಗೆ ಉಂಡು ಮಲಗಿದ್ರು. ಅವರು ಕಲಬುರಗಿಗೆ ಬಂದು ಹೋಗಿದ್ದು ಸಂತೋಷ. ಭಾರಿ ಮಳೆ ಹಿನ್ನಲೆ ಸಡನ್ನಾಗಿ ಮಣ್ಣು ಮಿಶ್ರಿತ ನೀರು ಪೂರೈಕೆಯಾಗಿದೆ. ಮುಂಜಾಗ್ರತೆಯಾಗಿ ಮೂರು ದಿನ ತುರ್ತು ಅಲ್ಲದ ಶಸ್ತ್ರ ಚಿಕಿತ್ಸೆ ತಡೆದಿದ್ದಾರೆ. ಕ್ಯಾತಲಾಗ್ ಎಲ್ಲಾ ರನ್ನಿಂಗ್ ಇತ್ತು, ಜಯದೇವ ಆಸ್ಪತ್ರೆ ಮೇಲೆ ಜನರಿಗೆ ವಿಶ್ವಾಸ ಇದೆ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಆರ್. ಅಶೋಕ ಅವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಅದು ಬಿಟ್ಟು ಅಭಿವೃದ್ದಿಗಾಗಿ ಸಲಹೆ ಕೊಡಲಿ. ಒಳ್ಳೆಯ ಸಲಹೆಗಳನ್ನು ಜಾರಿಗೆ ತರುತ್ತೇವೆ ಎಂದು ತಿರುಗೇಟು ನೀಡಿದರು.
