ಬೆಂಗಳೂರು: “ಡಿ” ಬಾಸ್ ಖ್ಯಾತಿಯ ದರ್ಶನ್ 2 ನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. 2011 ರಲ್ಲಿ ತಮ್ಮ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ದರ್ಶನ್, ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ.
ನಟ ದರ್ಶನ್ 2011 ರಲ್ಲಿ ತಮ್ಮ ಪತ್ನಿ ವಿಜಯಲಕ್ಷಿö್ಮ ಅವರ ಮೇಲೆ ಹಲ್ಲೆ ನಡೆಸಿದ್ದರು. ಅವರ ಕೈ ಮುರಿದಿದ್ದು, ಮುಖ, ತಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ಗಾಯಗಳಾಗಿದ್ದವು. ಹೀಗಾಗಿ, ಅವರು ನೀಡಿದ ದೂರಿನ ಆಧಾರದಲ್ಲಿ ದರ್ಶನ್ ಅವರನ್ನು ಬಂಧಿಸಿದ್ದ ಪೊಲೀಸರು, ಅವರನ್ನು ಜೈಲಿಗೆ ಕಳಿಸಿದ್ದರು.
ಅನಂತರ ನಡೆದ ಕೆಲವು ಬೆಳವಣಿಗೆಗಳಲ್ಲಿ ಚಿತ್ರರಂಗದ ಗಣ್ಯರ ಮಧ್ಯಸ್ಥಿಕೆಯಲ್ಲಿ ವಿಜಯಲಕ್ಷಿö್ಮ ಅವರು ಮನಸ್ಸು ಬದಲಾಯಿಸಿ ತಮ್ಮ ದೂರನ್ನು ವಾಪಸ್ ಪಡೆದುಕೊಂಡಿದ್ದರು. ಹೀಗಾಗಿ, ದರ್ಶನ್ ಅವರನ್ನು ಬಂಧನದಿAದ ಮುಕ್ತ ಮಾಡಲಾಗಿತ್ತು.
ಪ್ರಕರಣದ ನಂತರವೂ ದರ್ಶನ್ ಆಗಾಗ ಇಂತಹದ್ದೇ ಘಟನೆಗಳಲ್ಲಿ ಭಾಗಿಯಾಗುತ್ತಲೇ ಇದ್ದರು. ಫಾರ್ಮ್ ಹೌಸ್ ಕೆಲಸಗಾರರ ಮೇಲೆ ಹಲ್ಲೆ, ಹೋಟೆಲ್ ರೂಮ್ನಲ್ಲಿ ಸಪ್ಲೇಯರ್ ಮೇಲೆ ಹಲ್ಲೆ, ಮಾಧ್ಯಮಗಳ ಮೇಲೆ ನಿಂದನೆ ಸಏರಿದಂತೆ ವಿವಿಧ ವಿವಾದಗಳನ್ನು ಮೈಮೇಲೆಳೆದುಕೊಳ್ಳುತ್ತಿದ್ದರು.
ಇದೀಗ ತಮ್ಮ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ರೇಣುಕಾ ಸ್ವಾಮಿ ಎಂಬಾತನನ್ನು ಕಿಡ್ನಾಪ್ ಮಾಡಿಸಿ, ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರಕರಣದಲ್ಲಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
