ಮುಂಬಯಿ: ಬಾಲಿವುಡ್ ನಟಿ ರವೀನಾ ಟಂಡನ್ ಹಲ್ಲೆ ಯತ್ನ ನಡೆದಿದ್ದು, ವೇಗದ ಚಾಲನೆ ಮಾಡಿದ್ದರೆ ಎಂಬ ಆರೋಪದಲ್ಲಿ ಅವರ ಮೇಲೆ ಹಲ್ಲೆ ಯತ್ನ ನಡೆದಿರುವ ವಿಡಿಯೋ ವೈರಲ್ ಆಗಿದೆ.
ಬಾಂದ್ರಾದ ಕಾರ್ಟನ್ ರಸ್ತೆಯ ರಿಜ್ವಿ ಕಾಲೇಜ್ ಬಳಿ ರಸ್ತೆಯಲ್ಲಿ ಮೂವರು ಬುರ್ಖಾ ತೊಟ್ಟ ಮಹಿಳೆಯರು ರವೀನಾ ಕಾರು ಅಡ್ಡಗಟ್ಟಿ, ಅವರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ರವೀನಾ ಅವರು, ದಾಳಿ ನಡೆಸಿದ ಗುಂಪನ್ನು ಕುರಿತು, ನನ್ನನ್ನು ಹೊಡೆಯಬೇಡಿ ಎಂದು ಮನವಿ ಮಾಡಿಕೊಳ್ಳುವ ದೃಶ್ಯವಿದೆ.
ಗುಂಪಿನಲ್ಲಿರುವ ವ್ಯಕ್ತಿಯೊಬ್ಬ ನನ್ನ ಮೂಗಲ್ಲಿ ರಕ್ತ ಬರುತ್ತಿದೆ. ನೀವು ಮತ್ತು ನಿಮ್ಮ ಡ್ರೈವರ್ ರಾಶ್ ಡ್ರೈವಿಂಗ್ ಮಾಡಿದ್ದೀರಿ ಎಂಬ ಆರೋಪ ಮಾಡುತ್ತಾನೆ. ಆದರೆ, ಆತನ ಮುಖ ವಿಡಿಯೋದಲ್ಲಿ ಕಾಣಿಸಿಲ್ಲ.
ಆಲ್ಕೀಹಾಲ್ ಸೇವನೆ ಮಾಡಿ ವಾಹನ ಚಾಲನೆ ಮಾಡಿದ್ದಾರೆ ಎಂಬ ಆರೋಪದಡಿ ಅವರ ಮೇಲೆ ಸಾರ್ವಜನಿಕರು ಖಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಅವರ ಪತಿ, ಸಿನಿಮಾ ವಿತರಕ ಅನಿಲ್ ತಡಾನಿ ಕೂಡ ಪೊಲೀಸ್ ಠಾಣೆಗೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಯಾವುದೇ ಅಞದಿಕೃತ ಪ್ರಕರಣ ದಾಖಲಾಗಿಲ್ಲ, ಹಾಗೂ ಈ ಕುರಿತು ರವೀನಾ ಟಂಡನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ನಡುವೆ ಟ್ವೀಟರ್ ಎಕ್ಸ್ ಖಾತೆಯಲ್ಲಿ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದು, ಕಾರು ಬುರ್ಖಾಧಾರಿ ಮಹಿಳೆಯರಿಗೆ ಗುದ್ದದಿದ್ದರೂ, ಸುಮ್ಮನೆ ಅಡ್ಡಗಟ್ಟಿ ಜಗಳ ತೆಗೆದಿದ್ದಾರೆ. ಇದು ರವೀನಾ ಟಂಡನ್ ವಿರುದ್ಧ ಕಿಡಿಗೇಡಿಗಳು ನಡೆಸಿರುವ ಷಡ್ಯಂತ್ರ ಎಂದು ನೆಟ್ಟಿಗರು ದೂರಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.
ರವೀನಾ ಟಂಡನ್ ಬಾಲಿವುಡ್ ಖ್ಯಾತ ನಟಿಯಾಗಿದ್ದು, ಕನ್ನಡದ ಉಪೇಂದ್ರ ಸಿನಿಮಾದ ಕೀರ್ತಿ ಪಾತ್ರದ ಮೂಲಕ ಕನ್ನಡಿಗರಿಗೆ ಚಿರಪರಿಚಿತ. ಇತ್ತೀಚೆಗೆ ಕೆಜಿಎಫ್-2 ಚಿತ್ರದಲ್ಲಿ ಕೂಡ ಅವರು ಅಭಿನಯಿಸಿದ್ದರು. ಮಸ್ತು ಮಸ್ತು ಹುಡುಗಿ ಬಂದ್ಲು ಹಾಡಿನ ಮೂಲಕ ಕನ್ನಡಿಗರ ಮನಗೆದ್ದಿದ್ದರು.

