ಬೆಂಗಳೂರು: ಯುವಕನೊಬ್ಬ ನಾಲ್ಕು ಅಂತಸ್ತಿನ ಕಟ್ಟಡವನ್ನೇರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನ ಶೇಷಾದ್ರಿಪುರದಲ್ಲಿ ನಡೆದಿದೆ.
ಶೇಷಾದ್ರಿಪುರ ಕಾಲೇಜು ಹಿಂಭಾಗದಲ್ಲಿರುವ ನೂತನ ನಿರ್ಮಾಣಣವಾಗುತ್ತಿರುವ ಕಟ್ಟಡ ಮೇಲೆ ಹತ್ತಿ ನಿಂತಿರುವ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಗುತ್ತಾ, ನಿಂತಿದ್ದಾನೆ.
ಆತನನ್ನು ಮನವೊಲಿಸಿ ಕೆಳಗಿಳಿಯುವಂತೆ ಸ್ಥಳೀಯರು ಮನವಿ ಮಾಡುತ್ತಿದ್ದರೂ, ಆತ ಯಾರ ಮಾತಿಗೆ ಕ್ಯಾರೆ ಎನ್ನುತ್ತಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಶೇಷಾದ್ರಿಪುರ ಪೊಲೀಸರು ಆಗಮಿಸಿದ್ದು, ಆತನನ್ನು ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಆತ್ಮಹತ್ಯೆಗೆ ಯತ್ನಿಸುತ್ತಿರುವ ಯುವಕ ತನ್ನ ಹೆಸರು ಮಂಜು ಎಂದು ಹೇಳಿಕೊಳ್ಳುತ್ತಿದ್ದಾನೆ. ಜತೆಗೆ ನಾನು ತುಂಬಾ ಚೆನ್ನಾಗಿ ಓದುತ್ತಿದ್ದೆ,. ಆದರೆ, ಕಾಲೇಜಿನಲ್ಲಿ ನನಗೆ ಅನ್ಯಾಯವಾಗಿದೆ. ಜೀವನ ಸಾಕು ಎನಿಸಿದೆ ಎನ್ನುತ್ತಿದ್ದಾನೆ.
ಪೊಲೀಸರು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿಕೊಂಡಿದ್ದು, ಆತನ ರಕ್ಷಣೆಗೆ ಪ್ರಯತ್ನ ನಡೆಸುತ್ತಿದ್ದಾರೆ. ಆತನ ಮನವೊಲಿಸುವ ಪ್ರಯತ್ನ ಮುಂದುವರಿದಿದೆ.
