ಅಪರಾಧ ಸುದ್ದಿ

ಬ್ಯಾಂಕ್ ಎಟಿಎಂಗಳಲ್ಲಿ ಕಳ್ಳತನಕ್ಕೆ ಯತ್ನ: ಆರೋಪಿಯ ಬಂಧನ

Share It

ಬೆಂಗಳೂರು: ಬ್ಯಾಂಕ್ ಎಟಿಎಂಗಳಲ್ಲಿ ಕಳ್ಳತನಕ್ಕೆ ಯತ್ನಿಸಿ ನಂತರ ಪರಾರಿಯಾಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಶೇಷಾದ್ರಿಪುರದ ನಿವಾಸಿ ಹಸನ್ ಸಾಬ್ ಬಂಧಿತ ಆರೋಪಿ. ಈತ ಶೇಷಾದ್ರಿಪುರದ ಕೆನರಾ ಬ್ಯಾಂಕ್ ಎಟಿಎಂ ಅನ್ನು ಕಟರ್ ಮೂಲಕ ಕಟ್ ಮಾಡಲು ಪ್ರಯತ್ನಿಸಿದ್ದ. ಶನಿವಾರ ಬೆಳಗ್ಗಿನ ಜಾವ ೩ ಗಂಟೆಗೆ ಯತ್ನ ನಡೆದಿದ್ದು, ಸೈರನ್ ಮೊಳಗುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದ.

ಅದಕ್ಕಿಂತ ಮೊದಲು ಕಬ್ಬನ್ ಪೇಟೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದನ್ನು ಪೊಲೀಸರ ವಿಚಾರಣೆ ವೇಳೆ ಆತ ಬಾಯ್ಬಿಟ್ಟಿದ್ದಾನೆ. ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ಕಳ್ಳತನಕ್ಕೆ ಯತ್ನಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಕಳ್ಳತನ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಹಸನ್ ಸಾಬ್ ನನ್ನು ವಿಚಾರಣೆ ನಡೆಸುತ್ತಿದ್ದಾರೆ.


Share It

You cannot copy content of this page