ಮಂಗಳೂರು: ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮಂಗಳೂರಿನಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ತುಂಬಿ ಹರಿಯುತ್ತಿದ್ದ ರಾಜಕಾಲುವೆಗೆ ಆಟೋವೊಂದು ಮಗುಚಿಬಿದ್ದು, ಚಾಲಕ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ರಾಜಕೇಲುವೆಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಇದು ಅರಿವಿಗೆ ಬಾರದ ಆಟೋ ಚಾಲಕ ನೀರಿನಲ್ಲಿ ಆಟೋ ಇಳಿಸಿದ್ದಾನೆ. ರಭಸದಿಂದ ಹರಿಯುತ್ತಿದ್ದ ನೀರು ಆಟೋ ಸಮೇತ ಚಾಲಕನನ್ನು ರಾಜಕಾಳುವೆಯೊಳಗೆ ಕೊಂಡೊಯ್ದಿದೆ. ನೀರಿನಲ್ಲಿ ಸಿಲುಕಿ ಚಾಲಕ ದೀಪಕ್ (೪೦) ಮೃತಪಟ್ಟಿದ್ದಾನೆ.
ಆಟೋವನ್ನು ಮೇಲೆತ್ತಲು ಸಾರ್ವಜನಿಕರು ಹರಸಾಹಸ ಪಟ್ಟು, ಕೊನೆಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ದೀಪಕ್ ಶವ ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ರಾಜಕಾಲುವೆಗೆ ತಡೆಗೋಡೆ ನಿರ್ಮಿಸದಿರುವುದೇ ದುರಂತಕ್ಕೆ ಕಾರಣ ಎಂದು ಸಆರ್ವಜನಿಕರು ಆರೋಪಿಸಿದ್ದು, ಮಂಗಳೂರು ಮಹಾನಗರ ಪಾಲಿಕೆ ವಿರುದ್ಧ ಹಿಡಿಶಾಪ ಹಾಕಿದ್ದಾರೆ.