60 ಕಿ.ಮೀ ದೂರದಲ್ಲೇ ವಾಹನಗಳಿಗೆ ತಡೆ: ಕೇರಳ ಪೊಲೀಸರ ವಿರುದ್ಧ ಅಯ್ಯಪ್ಪ ಭಕ್ತರ ಆಕ್ರೋಶ
ಮೈಸೂರು: ಅಯ್ಯಪ್ಪ ದರ್ಶನಕ್ಕೆ ತೆರಳಿರುವ ರಾಜ್ಯದ ವಾಹನಗಳನ್ನು ೬೦ ಕಿ.ಮೀ ದೂರದಲ್ಲೇ ತಡೆಯುತ್ತಿದ್ದು, ಕೇರಳ ಸರಕಾರದ ವಿರುದ್ಧ ಭಕ್ತರು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಮಕರ ಜ್ಯೋತಿ ಹಿನ್ನೆಲೆಯಲ್ಲಿ ರಾಜ್ಯದಿಂದ ಲಕ್ಷಾಂತರ ಜನರು ಶಬರಿಮಲೆಗೆ ತೆರಳಿದ್ದಾರೆ. ಆದರೆ, ಏಉಮಲೆಯಲ್ಲಿಯೇ ವಾಹನಗಳನ್ನು ತಡೆದು ಕೇರಳ ಸಾರಿಗೆ ಬಸ್‌ಗಳಲ್ಲಿಯೇ ಶಬರಿಮಲೆಗೆ ತೆರಳುವಂತೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ. ಹೀಗಾಗಿ, ಮಾಲಾಧಾರಿಗಳು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.
ರಾಜ್ಯದಿಂದ ತೆರಳಿರುವ ಭಕ್ತರು ಕೇರಳ ಪೊಲೀಸರು ಮತ್ತು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆಯಲ್ಲಿಯೇ ಕುಳಿತು ಭಜನೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಆನ್‌ಲೈನ್ ಬುಕ್ಕಿಂಗ್ ಮಾಡಿಕೊಂಡಿರುವ ವಾಹನಗಳಿಗೆ ಮಾತ್ರವೇ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಲಾಗಿದೆ.


