ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ನೂತನ ಕುಲಪತಿಯಾಗಿ ಪ್ರೊ. ಬಿ.ಕೆ ರವಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ, ಪ್ರಾಧ್ಯಾಪಕರಾದ ಡಾ. ಎನ್. ಸಂಜೀವ್ ರಾಜ್ ಸನ್ಮಾನಿಸಿ ಗೌರವಿಸಿದರು.
ನಂತರ ಪ್ರಾಧ್ಯಾಪಕರಾದ ಡಾ. ಎನ್. ಸಂಜೀವ್ ರಾಜ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರೊ. ಬಿ.ಕೆ.ರವಿ ರವರು ನಮ್ಮ ಪತ್ರಿಕೋದ್ಯಮ ವಿಭಾಗದಿಂದ ಎರಡನೇ ಕುಲಪತಿಯಾಗಿದ್ದು ಹೆಮ್ಮೆ ಎಂದು ಸಂತಸಪಟ್ಟರು.
ರಾಜ್ಯದ ಅಹಿಂದ ಸಮುದಾಯಗಳಿಗೆ ಮೇರು ಶಿಖರ ಇದ್ದಂತೆ, ಇವರು ಈಗಾಗಲೇ ಕೊಪ್ಪಳ ವಿವಿಯ ಪ್ರಥಮ ಕುಲಪತಿಯಾಗಿದ್ದರು. ಇತ್ತೀಚಿಗೆ ರಾಜ್ಯ ಸರ್ಕಾರವು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ನೇಮಕ ಮಾಡಿರುವುದು ವಿಶೇಷ ಸಂಗತಿ, ಇನ್ನೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರವಾದ ಶಿಷ್ಯ ಬಳಗವನ್ನೇ ಹೊಂದಿರುವರು, ಇವರಿಗೆ ಇನ್ನಷ್ಟು ಸೇವೆ ಮಾಡಲು ಅ ಭಗವಂತ ಶಕ್ತಿ ನೀಡಲೆಂದು ಶುಭ ಹಾರೈಸುತ್ತೇನೆ ಎಂದರು.
ಇದೇ ವೇಳೆ ಸಂವಹನ ವಿಭಾಗದ ಸಂಶೋಧನಾರ್ಥಿಗಳಾದ ಈಶ್ವರ್, ಮಂಜುನಾಥ ಕೆ, ಶಶಿಕುಮಾರ್ ಪಿ, ವಿನೋದ್ ಕುಮಾರ್ ಡಿ. ಚೌವಣ್, ಪ್ರವೀಣ್ ಕುಮಾರ್, ಹರಿಣಿ ಬಿ, ಗಾಯತ್ರಿ ವೈ, ಪುನೀತ, ಕೆಂಪರಾಜ್ ಸಿ.ವಿ, ಮತ್ತಿತರರು ಉಪಸ್ಥಿತರಿದ್ದರು.

