ರಾಜಕೀಯ ಸುದ್ದಿ

4 ಬಾರಿ ಗೆದ್ದು ಬಂಗಾರಪ್ಪ ದಾಖಲೆ ಸರಿಗಟ್ಟಿದ ರಾಘವೇಂದ್ರ

Share It

ಶಿವಮೊಗ್ಗ : ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ನಾಲ್ಕನೇ ಬಾರಿ ಗೆಲುವು ಸಾಧಿಸುವ ಮೂಲಕ ಬಂಗಾರಪ್ಪ ಅವರ ದಾಖಲೆ ಸರಿಗಟ್ಟಿದ್ದಾರೆ. ಅಷ್ಟೇ ಅಲ್ಲದೆ ಅತಿ ಹೆಚ್ಚು ಅಂತರದ ಗೆಲುವು ಸಾಧಿಸುವ ಮೂಲಕ ಹಿಂದಿನ ರೆಕಾರ್ಡ್ ಮುರಿದಿದ್ದಾರೆ.

ರಾಘವೇಂದ್ರ ಈ ಸಲ ಅನೇಕ ಸಾಧನೆಗಳನ್ನ ದಾಖಲಿಸಿದ್ದಾರೆ. ೨೦೦೯ ರಲ್ಲಿ ಅವರು ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿ 4,82,783 ಮತಗಳನ್ನು ಪಡೆದಿದ್ದು ಒಟ್ಟಾರೆ ಮತದಾನದ ಪ್ರಮಾಣದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮತ ಪಡೆದಿದ್ದರು. ಆನಂತರ 2014 ರಲ್ಲಿ ಬಿಎಸ್ ಯಡಿಯೂರಪ್ಪ ಸಂಸದರಾಗಿ ಆಯ್ಕೆಯಾಗಿದ್ದರು, ಅದಾದ ಬಳಿಕ 2014 ರಲ್ಲಿ ನಡೆದ ಉಪಚುನಾವಣೆ ಸಂದರ್ಭದಲ್ಲಿ ಬಿವೈಆರ್ ಮತ್ತೆ ಸ್ಪರ್ಧಿಸಿ 5,43,306 ಮತಗಳನ್ನ ಪಡೆದಿದ್ದರು. ಆಗಲು ಅವರು 50.73 ಶೇಕಡಾವಾರು ಮತ ಪಡೆದಿದ್ದರು. ಹಿಂದಿನ ಚುನಾವಣೆಗೆ ಹೋಲಿಸಿದ್ದರೇ ಶೇಕಡಾವಾರು ಮತಗಳಲ್ಲಿ ತುಸು ಕಡಿಮೆಯಾಗಿತ್ತು.

2019 ರಲ್ಲಿ ನಡೆದ ಚುನಾವಣೆಯಲ್ಲಿ 7,29,872 ಮತ ಪಡೆದಿದ್ದ ರಾಘವೇಂದ್ರ ಶೇಕಡಾವಾರು 56.86 ರಷ್ಟು ಮತಪಡೆದು ತಮ್ಮ ಗ್ರಾಫ್ ಏರಿಸಿಕೊಂಡಿದ್ದರು. ಇನ್ನೂ ಈ ಸಲ ಅಂದರೆ 2024 ರ ಚುನಾವಣೆಯಲ್ಲಿ 7,78,721 ಮತಗಳನ್ನ ಪಡೆದು ನಾಲ್ಕನೇ ಸಲ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಈ ಸಲ ರಾಘವೇಂದ್ರ ತಮ್ಮ ಮತಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

ನಾಲ್ಕನೆ ಬಾರಿಗೆ ಆಯ್ಕೆಯಾಗುವ ಮೂಲಕ ಶಿವಮೊಗ್ಗದಲ್ಲಿ ಅತಿಹೆಚ್ಚು ಬಾರಿ ಸಂಸದರಾದ ವ್ಯಕ್ತಿ ಎಂಬ ದಾಖಲೆ ಬರೆದಿದ್ದಾರೆ. ಶಿವಮೊಗ್ಗದಲ್ಲಿ ಟಿವಿ ಚಂದ್ರಶೇಖರಪ್ಪ ಎರಡು ಸಲ ಎಂಪಿಯಾಗಿದ್ದರು. ಆ ಬಳಿಕ ಮಾಜಿ ಸಿಎಂ ಬಂಗಾರಪ್ಪ 1996, 1999, 2004, ಮತ್ತು 2005 ಸಂಸದರಾಗಿದ್ದರು. ಈ ಮೂಲಕ ಅವರು ನಾಲ್ಕು ಸಲ ಸಂಸದರಾಗಿ ಆಯ್ಕೆಯಾದ ಸಾಧನೆ ಮಾಡಿದ್ದರು.. ಇನ್ನೂ 2009 ರಲ್ಲಿ ಬಿ.ವೈ. ರಾಘವೇಂದ್ರ ವಿರುದ್ಧ ಎಸ್ ಬಂಗಾರಪ್ಪ ಬಳಿಕ ಸೋಲು ಕಂಡಿದ್ದರು.

2009 ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದ ಬಿ.ವೈ.ರಾಘವೇಂದ್ರ, 2018ರ ಉಪ ಚುನಾವಣೆ, 2019 ಜನರಲ್ ಎಲೆಕ್ಷನ್ ನಲ್ಲಿ ಗೆದ್ದಿದ್ದರು. ಇದೀಗ, 2024 ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಂಗಾರಪ್ಪರವರ ಸಾಲಿನಲ್ಲಿ ಸೇರಿದ್ದಾರೆ. ಬಂಗಾರಪ್ಪ, ಮಧು ಬಂಗಾರಪ್ಪ, ಗೀತಾ ಶಿವರಾಜಕುಮಾರ್ ಹೀಗೆ ಸಾರೆಕೊಪ್ಪ ಬಂಗಾರಪ್ಪ ಹಾಗೂ ಅವರ ಮಕ್ಕಳನ್ನ ಸೋಲಿಸಿದ ದಾಖಲೆಯನ್ನು ಸಹ ಬಿ.ವೈ. ರಾಘವೇಂದ್ರ ತಮ್ಮದಾಗಿಸಿಕೊಂಡಿದ್ದಾರೆ.


Share It

You cannot copy content of this page