ಹೊಸಪೇಟೆ: ಗಂಡನಿಂದ ಬೇರೆ ಇದ್ದ ಮಹಿಳೆಯೊಬ್ಬರನ್ನು ಕತ್ತುಕೊಯ್ದು ಕೊಲೆ ಮಾಡಿರುವ ಘಟನೆ ಹೊಸಪೇಟೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಾಪಲಗುಡ್ಡದ ನಿವಾಸಿ ರಘು ಎಂಬುವವರ ಪತ್ನಿ ಗಂಡನಿಂದ ಕಳೆದ ಮೂರು ವರ್ಷಗಳಿಂದ ಬೇರೆ ವಾಸಿಸುತ್ತಿದ್ದರು. ಆಕೆಯ ಮನೆಯಲ್ಲಿ ಕತ್ತುಕೊಯ್ದು ಆಕೆಯನ್ನು ಕೊಲೆ ಮಾಡಲಾಗಿದ್ದು, ಕೊಲೆ ಯಾರಿಂದ ನಡೆದಿದೆ ಎಂಬುದು ಗೊತ್ತಾಗಿಲ್ಲ.
ಚಿತ್ತವಾಡ್ಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್ಪಿ, ಡಿಎಸ್ಪಿ, ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದ್ದು, ಕೊಲೆಗಾರರ ಪತ್ತೆಗೆ ಬಲೆ ಬೀಸಿದ್ದಾರೆ.

