ಲೋಕಸಭಾ ಚುನಾವಣೆ ಹಿನ್ನೆಲೆ: ಏ.26 ರಂದು ಮೆಟ್ರೋ ರೈಲು ಸೇವಾವಧಿ ವಿಸ್ತರಣೆ
ಬೆಂಗಳೂರು, ಏ.24: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 26 ರಂದು ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ ಎಂದು BMRCL ತಿಳಿಸಿದೆ. ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ, ನಾಗಸಂದ್ರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ, ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳಿಂದ ಕೊನೆಯ ರೈಲು ಸೇವೆಯನ್ನು ರಾತ್ರಿ 11.55 ರವರೆಗೆ ವಿಸ್ತರಿಸಲಾಗಿದೆ.
ಮೆಜೆಸ್ಟಿಕ್‌ನಿಂದ ಕೊನೆಯ ರೈಲು
ಇತ್ತ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಏ.26 ರ ಮಧ್ಯರಾತ್ರಿ 12.35 ಕ್ಕೆ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ನಿಂದ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ಹೊರಡಲಿದೆ.
Extension of Metro Service for Lok Sabha Elections 2024 held in Bengaluru on 26.04.2024. Public are requested to take note & make use of this facility. pic.twitter.com/NddXHorGuu
— ನಮ್ಮ ಮೆಟ್ರೋ (@OfficialBMRCL) April 24, 202
ಈ ಮೊದಲಿನಿಂದಲೂ ಮೆಟ್ರೋ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹಬ್ಬಗಳು, ಕ್ರಿಕೆಟ್ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಮೆಟ್ರೋ ಸಂಚಾರ ಅವಧಿಯನ್ನು ವಿಸ್ತರಣೆಯನ್ನು ಮಾಡುತ್ತಲೇ ಬಂದಿದೆ. ಅದರಂತೆ ಏ.26 ರಂದು ಲೋಕಸಭಾ ಚುನಾವಣೆ ಮತದಾನ ಇರುವ ಹಿನ್ನಲೆ ಮಧ್ಯರಾತ್ರಿವರೆಗೆ ಸಂಚಾರ ಅವಧಿಯನ್ನು ವಿಸ್ತರಿಸಿದೆ.