ಬಾಗ್ದಾದ್(ಇರಾಕ್): ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ಮುಂದುವರೆದಿದ್ದು, ಇರಾಕ್ ರಾಜಧಾನಿ ಬಾಗ್ದಾದ್ನ ಅಮೆರಿಕ ರಾಯಭಾರ ಕಚೇರಿ ಆವರಣದ ಮೇಲೆ ಕ್ಷಿಪಣಿ ದಾಳಿ ನಡೆದಿದೆ.
ಆದರೆ, ಈ ಬಗ್ಗೆ ಯುಎಸ್ ರಾಯಭಾರ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕದ ನಾಗರಿಕರು ಮತ್ತು ಮೂಲಸೌಕರ್ಯಗಳ ಮೇಲೆ ಇರಾನ್ ಮತ್ತು ಅಲ್ಲಿನ ಮಿಲಿಟರಿ ಗುಂಪುಗಳು ದಾಳಿ ನಡೆಸಿದ ಬೆನ್ನಲ್ಲೇ, ಶುಕ್ರವಾರ ಯುಎಸ್ ರಾಯಭಾರ ಕಚೇರಿ ಇರಾಕ್ಗೆ ತನ್ನ ಲೆವೆಲ್ 4 ಭದ್ರತಾ ಎಚ್ಚರಿಕೆ ನೀಡಿತ್ತು. ಅಲ್ಲದೆ, ಅಮೆರಿಕನ್ನರನ್ನು ಗುರಿಯಾಗಿಸಿ ದಾಳಿ ಮುಂದುವರೆಯಬಹುದು ಎಂದು ತಿಳಿಸಿತ್ತು.
ವಿಶ್ವದ ಅತಿದೊಡ್ಡ ಯುಎಸ್ ರಾಜತಾಂತ್ರಿಕ ಸೌಲಭ್ಯಗಳಲ್ಲಿ ಒಂದಾದ ವಿಶಾಲವಾದ ರಾಯಭಾರ ಕಚೇರಿ ಸಂಕೀರ್ಣವನ್ನು ಗುರಿಯಾಗಿಸಿ ಇರಾನ್ ಮಿಲಿಟರಿ ಪಡೆಗಳು ಈ ಹಿಂದೆ ನಿರಂತರ ರಾಕೆಟ್ ಮತ್ತು ಡ್ರೋನ್ ದಾಳಿ ನಡೆಸಿವೆ. ಈ ಗುಂಪುಗಳು ಇತ್ತೀಚೆಗೆ ಅಮೆರಿಕ ಮತ್ತು ಒಕ್ಕೂಟ ಪಡೆಗಳ ನೆಲೆಗಳ ಮೇಲೆ ದಾಳಿ ಹೆಚ್ಚಿಸಿವೆ.
ಗುರುವಾರ ಉತ್ತರ ಇರಾಕ್ನಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಒಬ್ಬ ಫ್ರೆಂಚ್ ಸೈನಿಕ ಸಾವನ್ನಪ್ಪಿದ್ದಾನೆ. ಅಂತಾರಾಷ್ಟ್ರೀಯ ಒಕ್ಕೂಟದ ಭಾಗವಾಗಿ ಅಲ್ಲಿ ನೆಲೆಸಿದ್ದ ಹಲವಾರು ಜನರು ಗಾಯಗೊಂಡಿದ್ದರು.
ಶನಿವಾರ ಮುಂಜಾನೆ ಇರಾಕ್ನ ರಾಜಧಾನಿ ಬಾಗ್ದಾದ್ನಲ್ಲಿ ನಡೆದ ವಾಯುದಾಳಿಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಗ್ದಾದ್ನ ಕರ್ರಾಡಾ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

