ಬಿಡದಿ ರೈಲ್ವೇ ನಿಲ್ದಾಣ ಸ್ಫೋಟಿಸುವ ಬೆದರಿಕೆ: ಪಾಕಿಸ್ತಾನ್ ಪರ ಘೋಷಣೆ ಬರೆದವರ ಬೆಂಬಲಿಗರ ಕರೆ
ಬೆಂಗಳೂರು: ಬಿಡದಿ ರೈಲ್ವೇ ನಿಲ್ದಾಣವನ್ನು ಸ್ಫೋಟಗೊಳಿಸುವುದಾಗಿ ಬೆದರಿಕೆ ಕರೆ ಬಂದಿದ್ದು, ಪೊಲೀಸರು ರೈಲ್ವೇ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ.
ಬಿಡದಿಯ ಕಾರ್ಖಾನೆಯೊಂದರ ಗೋಡೆಯ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಎಂದು ಬರೆದಿದ್ದಾರೆ ಎಂಬ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಕರೆ ಮಾಡಿರುವ ಆಗಂತುಕರು ಬಂಧನ ಮಾಡಿರುವವರನ್ನು ಬಿಡುಗಡೆ ಮಾಡದಿದ್ದರೆ ಬಿಡದಿ ಪೊಲೀಸ್ ಠಾಣೆ ಸ್ಫೋಟಗೊಳಿಸುತ್ತೇವೆ ಎಂದು ಬೆದರಿಕೆ ಕರೆ ಮಾಡಿದ್ದಾರೆ.
ಈ ಕರೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸರು, ಶ್ವಾನ ದಳ ಮತ್ತು ಬಾಂಬ್ ನಿಷ್ಟಿçಯ ತಂಡದೊAದಿಗೆ ಬಿಡದಿ ರೈಲ್ವೆ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದೆ. ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆಯೂ ನಿಗಾವಹಿಸಿದೆ. ರೈಲುಗಳ ಪರಿಶೀಲನೆ ಮತ್ತು ನಿಲ್ದಾಣದ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ.


