ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರದಲ್ಲಿ ಹೋಟೆಲ್ ರೆಸ್ಟೋರೆಂಟ್ ಗಳಿಗೇನು ಭರವಿಲ್ಲ. ಆದ್ರೆ ಈ ಹಿಂದೆ ಹೋಟೆಲ್ ಅವಧಿಯನ್ನು ಕಡಿತ ಗೊಳಿಸಲಾಗಿದೆ. ಆದ್ರೆ ಈಗ ಸರ್ಕಾರ ಹೋಟೆಲ್ ಸಂಘದ ಮನವಿಯನ್ನು ಒಪ್ಪಿ ಬೆಳಿಗ್ಗೆ 9 ರಿಂದ ರಾತ್ರಿ 1 ಗಂಟೆಯ ವರೆಗೆ ತೆರೆಯಲು ಮುಕ್ತ ಅವಕಾಶವನ್ನು ಕಲ್ಪಿಸಿದೆ.
ಈ ವಿಚಾರಕ್ಕೆ ಸಂಬಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶವನ್ನು ಹೊರಡಿಸಿದ್ದಾರೆ. ಆದೇಶದಲ್ಲಿ ಮುಖ್ಯವಾಗಿ ಕೆಲವೊಂದು ನಿಯಮಗಳನ್ನು ಸೇರಿಸಲಾಗಿದೆ.
ಸಿಎಲ್ 4, ಸಿಎಲ್ 6, ಸಿಎಲ್ 7, ಸಿಎಲ್ 7D ಲೈಸೆನ್ಸ್ ಪಡೆದಿರುವ ಹೋಟೆಲ್ ಗಳು ಹಾಗೂ ರೆಸ್ಟೋರೆಂಟ್ ಗಳು ಬೆಳಗ್ಗೆ 9 ರಿಂದ ರಾತ್ರಿ 1 ರ ವರೆಗೆ ವಹಿವಾಟು ನಡೆಸಬಹುದು , ಅದೇ ರೀತಿ ಸಿಎಲ್ 9 ಲೈಸೆನ್ಸ್ ಪಡೆದ ಬಾರ್‌ಗಳಿಗೆ ಬೆಳಗ್ಗೆ 10 ರಿಂದ ರಾತ್ರಿ 1 ಗಂಟೆಯ ವರೆಗೆ ನಡೆಸಲು ಅವಕಾಶ ನೀಡಲಾಗಿದೆ.
ಒಟ್ಟಾರೆ ಅಧಿಸೂಚಿಯ ಪ್ರಕಾರ ಹೋಟೆಲ್ ಮಾಲೀಕರು ಅಥವಾ ಇತರೆ ಆಹಾರ ಕೋಡುವ ಅಂಗಡಿ ಮುಂಗಟ್ಟುಗಳು ರಾತ್ರಿ 1 ಗಂಟೆಯ ವರೆಗೆ ಎಲ್ಲ ರೀತಿಯಾದ ವಹಿವಾಟನ್ನು ನಡೆಯಬಹುದು ಎಂದು ತಿಳಿಸಿದೆ.