ಉಪಯುಕ್ತ ಸುದ್ದಿ

ಬೆಂಗಳೂರ್ ಕರಗ ಇವತ್ತಿಂದ ಆರಂಭ

Share It


ಬೆಂಗಳೂರು: ನಾಡಿನ ಸುಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ ಇಂದಿನಿಂದ ಅಧಿಕೃತವಾಗಿ ಚಾಲನೆ ಸಿಗಲಿದೆ. ಇಂದಿನಿಂದ ಏ.23ರವರೆಗೆ ನಡೆಯಲಿರುವ ಕರಗ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಕರಗ ಸಮಿತಿ ತೀಮರ್ಾನಿಸಿದೆ.

ಈ ಬಾರಿಯೂ ಜ್ಞಾನೇಂದ್ರ ಅವರೇ ಕರಗ ಹೊರಲಿದ್ದಾರೆ. ಇನ್ನು ಈ ಬಾರಿ ದ್ರೌಪದಿ ದೇವಿಯ ಕರಗ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆಯನ್ನೂ ನಡೆಸಲಾಗಿದೆ. ಏಪ್ರಿಲ್ 23 ರ ಚೈತ್ರ ಮಾಸದ ಪೂಣರ್ಿಮೆಯಂದು ದ್ರೌಪದಿ ದೇವಿಯ ಹೂವಿನ ಕರಗ ಜರುಗಲಿದೆ. ಕರಗಕ್ಕೆ ಸಕರ್ಾರ ಹಾಗೂ ಬಿಬಿಎಂಪಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದು, ಕರಗ ವ್ಯವಸ್ಥಾಪನ ಸಮಿತಿಯಿಂದ ಪ್ರತಿಬಾರಿಯಂತೆ ಈ ಬಾರಿಯೂ ಪಕ್ಷಾತೀತವಾಗಿ ಉತ್ಸವ ನಡೆಯಲಿದೆ.

ಕರಗ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ಈ ಕುರಿತು ಮಾತನಾಡಿದ್ದು, ಮಸ್ತಾನ್ ಸಾಬ್ ದಗರ್ಾಕ್ಕೆ ಕರಗ ಹೋಗೆ ಹೋಗುತ್ತೆ, ಮೊದಲಿನಿಂದಲೂ ಇರುವ ಸಂಪ್ರದಾಯದಂತೆ ಕರಗ ನಡೆಯಲಿದೆ. ಯಾವುದೇ ಸಂಪ್ರದಾಯಗಳನ್ನು ಕಡಿತಗೊಳಿಸಲಾಗುವುದಿಲ್ಲ. ಶಾಂತಿ ಸೌಹಾರ್ದದಿಂದ ಕರಗ ಉತ್ಸವ ನಡೆಯಲಿದೆ ಎಂದು ಹೇಳಿದ್ದಾರೆ.

ಈ ಬಾರಿ ವೀರಕುಮಾರರಿಗೆ ಕೆಂಪು ವಸ್ತ್ರ ಹಾಗೂ ಮೈಸೂರು ಪೇಟ ಹಾಗೂ ದೀಕ್ಷೆ ಪಡೆಯುವರಿಗೆ ಖಡ್ಗ ನೀಡಲು ಮುಂದಾಗಿದ್ದೇವೆ. ಸುಮಾರು 800 ವರ್ಷಗಳ ಇತಿಹಾಸ ಇರೋ ಕರಗ ಉತ್ಸವ ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ಅಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ ಜ್ಞಾನೇಂದ್ರ ಅವರು 13 ನೇ ಬಾರಿ ಕರಗ ಹೊರುವರು, ರಾಜ್ಯ ಸೇರಿದಂತೆ ವಿದೇಶದಿಂದಲು ಈ ಉತ್ಸವ ನೋಡಲು ಲಕ್ಷಾಂತರ ಭಕ್ತಾಧಿಗಳು ಬರಲಿದ್ದಾರೆ ಎಂದಿದ್ದಾರೆ.

9 ದಿನ ವಿಶೇಷ ಪೂಜೆ: ಕರಗ ಉತ್ಸವದ ಮೊದಲ ದಿನ ಧ್ವಜಾರೋಹಣ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. 9 ದಿನಗಳವರೆಗೆ ನಿತ್ಯ ಅಮ್ಮನಿಗೆ ವಿಶೇಷ ಪೂಜೆ ಮಾಡುತ್ತೇವೆ. ಏಪ್ರಿಲ್ 23 ರ ರಾತ್ರಿ 12 ಗಂಟೆಗೆ ಬೆಂಗಳೂರು ಕರಗ ನಡೆಯಲಿದೆ. ಇನ್ನು ಈ ಉತ್ಸವಕ್ಕೆ ರಾಜ್ಯದ ಗಣ್ಯರು ಸೇರಿ ಮಠಾಧೀಶರು ಅಗಮಿಸುತ್ತಾರೆ. ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಕರಗವು ಕನರ್ಾಟಕದ ಪ್ರಸಿದ್ಧ ಜಾನಪದ ಆಚರಣೆಯಾಗಿದ್ದು, ಆದಿಶಕ್ತಿ ದ್ರೌಪದಿಯನ್ನು, ವಹ್ನಿಕುಲ ಕ್ಷತ್ರಿಯ ಜನಾಂಗ ಆರಾಧಿಸುತ್ತದೆ. ಶತಮಾನಗಳ ಇತಿಹಾಸ ಹೊಂದಿರುವ ವಿಶ್ವಪ್ರಸಿದ್ಧ ಬೆಂಗಳೂರು ಕರಗಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಮೈಸೂರು ದಸರಾದಂತೆಯೇ ಬೆಂಗಳೂರು ಕರಗವೂ ಕೂಡ ರಾಜ್ಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ


Share It

You cannot copy content of this page