ಢಾಕಾ: ಬಾಂಗ್ಲಾದೇಶದ ಗಲಭೆಯ ಸಂದರ್ಭದಲ್ಲಿ ದೇಶದ್ರೋಹದ ಆರೋಪದಲ್ಲಿ ಬಂಧಿತರಾಗಿದ್ದ, ಬಾಂಗ್ಲಾದ ಇಸ್ಕಾನ್ ಮುಖಂಡ ಚಿನ್ಮಯ ದಾಸ್ ಅವರಿಗೆ ಬಾಂಗ್ಲಾ ನ್ಯಾಯಾಲಯ ಜಾಮೀನು ನೀಡಿದೆ.
ಚಟ್ಟೋಗ್ರಾಮ್ನಲ್ಲಿ ನಡೆದ ರ್ಯಾಲಿಯಲ್ಲಿ ಬಾಂಗ್ಲಾದೇಶದ ಅಧಿಕೃತ ಧ್ವಜದ ಮೇಲೆ ಕೇಸರಿ ಧ್ವಜ ಹಾಕಿದ್ದರು ಎಂಬ ಆರೋಪವನ್ನು ಚಿನ್ಮದಾಸ್ ವಿರುದ್ಧ ಹೊರಿಸಲಾಗಿತ್ತು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹುಕ್ಕುಗಳಿಗಾಗಿ ಹೋರಾಟ ನಡೆಸಿದ್ದ ಚಿನ್ಮಯ್ ದಾಸ್ ಬಾಂಗ್ಲಾದೇಶ ಸರಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
2024ರ ಅ.30 ರಂದು ಚಿನ್ಮಯ ಕೃಷ್ಣ ದಾಸ್ ಅವರು ಸೇರಿ 18 ಜನರ ವಿರುದ್ಧ ಚಿತ್ತಗಾಂಗ್ನಲ್ಲಿ ದೇಶದ್ರೋಹ ಪ್ರಕರಣ ದಾಖಲು ಮಾಡಲಾಗಿತ್ತು. ಅನಂತರ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು. ಹೀಗಾಗಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಬಾಂಗ್ಲಾದ ನ್ಯಾಯಾಲಯ ಅವರಿಗೆ ಜಾಮೀನು ನೀಡಿದ್ದು, ಅವರನ್ನು ಕೆಲ ಷರತ್ತುಗಳೊಡನೆ ಬಿಡುಗಡೆ ಮಾಡಲಾಗಿದೆ.