ರಾಜಕೀಯ ಸುದ್ದಿ

ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ : ಬಾಂಗ್ಲಾದೇಶದಲ್ಲಿ ಅರಾಜಕತೆ

Share It

ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹೋರಾಟ ಹಿಂಸಾತ್ಮಕವಾಗಿ ಬದಲಾಗಿದ್ದು, ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ನಂತರ ದೇಶ ತೊರೆಯಲು ಪ್ರಧಾನಿ ಹಸೀನಾ ತೀರ್ಮಾನಿಸಿದ್ದು, ಇದೀಗ ಬಾಂಗ್ಲಾದ ರಾಜಧಾನಿ ಢಾಕಾದಿಂದ ದೆಹಲಿಯ ಹಿಂಡನ್ ಏರ್‌ಬೇಸ್ ಗೆ ಆಗಮಿಸಿದ್ದಾರೆ. ಅಲ್ಲಿಂದ ದೆಹಲಿ ವಿಮಾನ ನಿಲ್ದಾಣ ತಲುಪಲಿದ್ದು, ನಂತರ ಲಂಡನ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ಶೇಖ್ ಹಸೀನಾ ರಾಜೀನಾಮೆಯ ನಂತರ ಬಾಂಗ್ಲಾದೇಶದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದ್ದು, ಅರಾಜಕತೆ ಸೃಷ್ಟಿಯಾಗಿದೆ. ಅನೇಕ ಹೋರಾಟಗಾರರು ಹಸೀನಾ ಅವರ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಿ ಸಿಕ್ಕಿಸಿಕ್ಕ ವಸ್ತುಗಳನ್ನು ಎತ್ತಿ ಬಿಸಾಕಿದ್ದಾರೆ.

ಬಾಂಗ್ಲಾದೇಶದಲ್ಲಿ ನಡೆದಿರುವ ಗಲಭೆಯಲ್ಲಿ ಈವರೆಗೆ 90ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು, ದೇಶಾದ್ಯಂತ ಧಂಗೆ ಸೃಷ್ಟಿಯಾಗಿತ್ತು. ಹೀಗಾಗಿ, ಹಸೀನಾ ರಾಜೀನಾಮೆ ನೀಡಿದ್ದು, ಇದೀಗ ದೇಶ ತೊರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.


Share It

You cannot copy content of this page