ಢಾಕಾ: ಬಾಂಗ್ಲಾದೇಶದಲ್ಲಿ ಇದ್ದಕ್ಕಿಂದ್ದಂತೆ ಭುಗಿಲೆದ್ದಿರುವ ಪ್ರತಿಭಟನೆ ಈಗ ಸೇನೆಗೂ ತಲುಪಿದೆ. ಪ್ರತಿಭಟನೆಯ ತೀರ್ವತೆಯಿದ ಹಸೀನಾ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಬಂದಿದ್ದಾರೆ. ಈ ಬೆನ್ನಲ್ಲೇ ಇಂದು ಬಾಂಗ್ಲಾ ದ ರಾಷ್ಟ್ರಪತಿ ಮೊಹಮ್ಮದ್ ಶಹಬುದ್ದೀನ್ ಸಂಸತ್ತನ್ನು ವಿಸರ್ಜನೆ ಮಾಡಿದ್ದಾರೆ.
ಮಾಹಿತಿಯ ಪ್ರಕಾರ ದೇಶದ ಮೂರು ಸೇನಾ ಮುಖ್ಯಸ್ಥರು, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ನಾಯಕರು ಮತ್ತು ಮುಖಂಡರು, ಹಾಗೂ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಮಾತು ಕತೆ ನಡೆಸಿ ನಿರ್ಧಾರಕ್ಕೆ ಬಳಲಾಗಿದೆ ಎಂದು ತಿಳಿಸಿದೆ.
ಹಸೀನಾ ಅವರ ವಿರೋಧಿ ಹಾಗೂ ಬದ್ದ ವೈರಿ ಯಾಗಿರುವ ಖಲೀದಾ ಜಿಯಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇವರನ್ನು 2018 ರಲ್ಲಿ ಭ್ರಷ್ಟಾಚಾರದ ಆರೋಪದಡಿ ಜೈಲಿಗೆ ಕಳುಹಿಸಿ ಕೊಡಲಾಗಿತ್ತು. ಎಲ್ಲರ ಒಪ್ಪಿಗೆಯ ಮೇರೆಗೆ ಬಿಡುಗಡೆ ಮಾಡಲಾಗಿದೆ.
ಆಗಸ್ಟ್ 5 ರಂದು ಗಲಭೆಯಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಬಿಡುಗಡೆ ಗೊಳಿಸಲಾಗಿದೆ. ಜಮಾತ್ ಎ ಇಸ್ಲಾಮಿ ಮುಖ್ಯಸ್ಥ ಡಾ. ಶಾಫಿಖರ್ ರೆಹ್ಮಾನ್ ಪತ್ರಿಕಾ ಗೋಷ್ಠಿಯಲ್ಲಿ ದೇಶದ ಪರಿಸ್ಥಿತಿಯನ್ನು ವಿವರವಾಗಿ ಹೇಳಿದ್ದಾರೆ .
ಹಸೀನಾ ಅವರು ಫಲಯಾನ ಮಾಡಿದ ವಿಷಯವನ್ನು ತಿಳಿದ ವೇಳೆ ಪ್ರತಿಭಟನಾಕಾರರು ಹಸೀನಾ ಅವರ ಮನೆಗೆ ದಾಳಿ ನಡೆಸಿ ಏನನ್ನು ಬಿಡದೆ ದೋಚಿದ್ದಾರೆ. ನಾಚಿಕೆ ಇಲ್ಲದೆ ಅವರ ಸೀರೆಗಳು ಹಾಗೂ ಒಳ ಉಡುಪು ಗಳನ್ನು ಕೂಡ ಕೊಂಡೊಯ್ಯುವ ದೃಶ್ಯಗಳು ವೈರಲ್ ಆಗಿವೆ.
