ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಸೋಮವಾರದಿಂದ ಏಪ್ರಿಲ್ 30 ರವರೆಗೆ ಪೂರ್ತಿ ಬೆಂಗಳೂರು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ದಾಸರಹಳ್ಳಿ ಬಿಬಿಎಂಪಿ ವಲಯ ವ್ಯಾಪ್ತಿಯಲ್ಲಿ ಪಾಲಿಕೆ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿ ಕೆಲಸ ಮಾಡುತ್ತಿದ್ದಾರೆ.
ದಾಸರಹಳ್ಳಿ ಬಿಬಿಎಂಪಿ ವಲಯದ 8 ವಾರ್ಡ್ ಗಳಲ್ಲಿ ಬಿಬಿಎಂಪಿ ಜೆಸಿ, ಪ್ರೀತಮ್ ನಸಲಾಪುರ್, ನವೀನ್ ಸಿಇ, ಬಸವರಾಜ್ ಕಬಾಡ ಎಜಿಎಂ, ಲೋಹಿತ್ ಎಸ್ ಡಬ್ಲ್ಯೂಎಂ. ಇಇ ಮಧುಕೃಷ್ಣ, ಡಿಸಿಎಂ, ಬಿಬಿಎಂಪಿ ಮಾರ್ಷಲ್, ಸೂಪರ್ ವೈಸರ್ ವಿಷ್ಣು, ಆಟೋ ಸೂಪರ್ ವೈಸರ್ ಮಂಜುನಾಥ್, ದಿನೇಶ್, ಸುರೇಶ್ ಮತ್ತು ರೂಪ ಪಿಕೆಎಸ್, ಸೂಪರ್ ವೈಸರ್ ಪಿಕೆಎಸ್ ಕ್ಲೀನಿಂಗ್ ಹಾಗೂ ಪೌರಕಾರ್ಮಿಕರೆಲ್ಲರು ಸೇರಿ ಸ್ವಚ್ಛತಾ ಮಾಡಲು ಶ್ರಮವಹಿಸುತ್ತಿದ್ದಾರೆ.
10 ದಿನಗಳ ಕಾಲ ರಸ್ತೆ ಬದಿಯ ಖಾಲಿ ಜಾಗಗಳಲ್ಲಿ ತ್ಯಾಜ್ಯ ಬಿಸಾಡುವ ಕಸದ ಸ್ಥಳಗಳನ್ನು ಗುರುತಿಸಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಕಸ ಬಿಸಾಡುವ ಜಾಗದಲ್ಲಿ ಜಾಗ್ರತಿ ಮೂಡಿಸಲು ರಂಗೋಲಿ ಹಾಕುತ್ತಿರುವುದು ಸೇರಿ ಸಾರ್ವಜನಿಕರಿಗೆ ಅಂಗಡಿ ಮಾಲೀಕರಿಗೆ ಕಸ ಹಾಕುವ ವಿಧಾನ ತಿಳಿಹೇಳುವುದು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಾಸರಹಳ್ಳಿ ಪೂರ್ತಿ ಸುಂಕದಕಟ್ಟೆಯಿಂದ ಚಿಕ್ಕಬಾಣವಾರದವರೆಗೆ ಸ್ವಚ್ಛತಾ ಕಾರ್ಯ ಭರದಿಂದ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳು, ಮಾರ್ಷಲ್ ಗಳು, ಪೌರಕಾರ್ಮಿಕರು ಹಾಜರಿದ್ದರು.

