ಬೆಳಗಾವಿ: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಗೆ ಜಿಲ್ಲಾ ಪೋಕ್ಸೋ ನ್ಯಾಯಾಲಯ 30 ವರ್ಷಗಳ ಕಠಿಣ ಶಿಕ್ಷೆ ಹಾಗೂ 1.50 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ಅಂಕಲಗಿ ಠಾಣಾ ವ್ಯಾಪ್ತಿಯಲ್ಲಿ 2025ರ ಜೂ. 23ರಂದು ಬಾಲಕಿಯನ್ನು ಹುಕ್ಕೇರಿ ತಾಲ್ಲೂಕಿನ ಮಾಸ್ತಿಹೊಳಿಯ ಮಂಜುನಾಥ ಶಂಕರ ಮೊಕಾಶಿ (24) ಮದುವೆಯಾಗುವುದಾಗಿ ಪುಸಲಾಯಿಸಿ ಮನೆಯಿಂದ ಮೋಟಾರ್ ಬೈಕಿನಲ್ಲಿ ಅಪಹರಣ ಮಾಡಿ, ಬಾಡಿಗೆ ಮನೆಯೊಂದರಲ್ಲಿ ಇಟ್ಟು ಆಕೆ ಮೇಲೆ ನಿರಂತರ ಅತ್ಯಾಚಾರ ಎಸಗಿ ಈ ಬಗ್ಗೆ ಹೊರಗಡೆ ಬಾಯ್ಬಿಟ್ಟರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಧಮಕಿ ಹಾಕಿದ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿ ನಾಪತ್ತೆಯಾದ ಬಗ್ಗೆ ಪೋಷಕರು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಬಾಲಕಿಯನ್ನು ಪತ್ತೆ ಹಚ್ಚಿ ಪ್ರಕರಣದ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದರು. ಅಂದಿನ ತನಿಖಾಧಿಕಾರಿ ಯಮನಪ್ಪ ಮಾಂಗ ಪಿ.ಎಸ್.ಐರವರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕ್ಕಾಗಿ ತನಿಖಾಧಿಕಾರಿರವರಾದ ಸುರೇಶ ಬಾಬು ಆರ್.ಬಿ ಸಿಪಿಐ ರವರು ಪ್ರಕರಣದ ತನಿಖೆಯನ್ನು ಮಾಡಿ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕೋ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ನ್ಯಾಯಾಧೀಶರಾದ ಸಿ, ಎಮ, ಪುಷ್ಪಲತಾ ಇವರ ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು ೮ ಸಾಕ್ಷಿಗಳ ವಿಚಾರಣೆ ಹಾಗೂ 70 ದಾಖಲೆಗಳು, 10 ಮುದ್ದೆ ಮಾಲುಗಳ ಆಧಾರದ ಮೇಲೆ ಆರೋಪಿ ಹುಕ್ಕೇರಿ ತಾಲ್ಲೂಕಿನ ಮಾಸ್ತಿಹೊಳಿಯ ಮಂಜುನಾಥ ಶಂಕರ ಮೊಕಾಶಿ (24) ಮೇಲಿನ ಆರೋಪ ಸಾಬೀತಾಗಿದೆ.
ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷರೂ. ದಂಡ ಬೇರೆ ಬೇರೆ ಎರಡು ಕಲಂಗಳಲ್ಲಿ ರೂಪಾಯಿ 50,೦೦೦/- ದಂಡದ ತುಂಬದೆ ಇದ್ದ ಕಾಲಕ್ಕೆ 1 ವರ್ಷಗಳ ಶಿಕ್ಷೆ ಪ್ರಕರಣದ ತೀರ್ಪು ನೀಡಿದೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂಪಾಯಿ 4 ಲಕ್ಷಗಳ ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶ ನೀಡಿದೆ. ಈ ಹಣವನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ 5 ವರ್ಷಗಳವರೆಗೆ ಮುದ್ದಾದ ಠೇವಣಿಯಾಗಿ ಇಡಲು ನ್ಯಾಯಾಲಯವು ಆದೇಶವನ್ನು ನೀಡಲಾಗುತ್ತದೆ. ಸರಕಾರದ ಪರವಾಗಿ ಎಲ್. ವಿ ಪಾಟೀಲ, ಸರ್ಕಾರಿ ವಿಶೇಷ ಅಭಿಯೋಜಕರು, ಬೆಳಗಾವಿ ಇವರು ಹಾಜರಾಗಿ ವಾದ ಮಂಡಿಸಿದರು.

