ಸುದ್ದಿ

ಬೆಳಗಾವಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳರ ಬಂಧನ

Share It

ಬೆಳಗಾವಿ: ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಬೆಳಗಾವಿ ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಕಿಣಿಯೇ ಗ್ರಾಮದ, ಹಾಲಿ ಗಣೇಶಪುರದ ಚೇತನ್ ಮಾರುತಿ ಶಿಂದೆ( 26 )ಮತ್ತು ಅನಗೋಳ ರಘುನಾಥಪೇಟೆಯ ಕರಣ್ ಉತ್ತಮ್ ಮುತಗೇಕರ(27) ಬಂಧಿತರು. ಇವರ ಮೇಲೆ ಖಡೇ ಬಜಾರ್, ಕ್ಯಾಂಪ್ ಮತ್ತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿತ್ತು.

ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಉಪ ಪೊಲೀಸ್ ಆಯುಕ್ತರು (ಅ&ಸಂ) ಮತ್ತು ಸಹಾಯಕ ಪೊಲೀಸ್ ಆಯುಕ್ತರು ಖಡೇಬಜಾರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಖಡೇಬಜಾರ ಪೊಲೀಸ್ ಠಾಣೆ ಇನ್ಸಪೇಕ್ಟರ್ ಹಾಗೂ ಕ್ಯಾಂಪ್ ಪೊಲೀಸ್ ಇನ್ಸಪೇಕ್ಟರ ರವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ಜನರ ತಂಡವು ದಿನಾಂಕ: 09/07/2024 ರಂದು ಆರೋಪಿತರನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಒಟ್ಟು ಮೂರು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, 1) 77 ಗ್ರಾಂ ಬಂಗಾರದ ಆಭರಣಗಳು, ಅ.ಕಿ: 5,54,400/-ರೂ, 2) 200 ಗ್ರಾಂ ಬೆಳ್ಳಿಯ ಆಭರಣಗಳು, ಅ.ಕಿ: 20,000/-ರೂ, 3) ಲ್ಯಾಪಟಾಪ್ ಒಂದು, ಅ.ಕಿ: 20,000/- ರೂ, 4) ಮೊಬೈಲ್ ಒಂದು, ಅ.ಕಿ: 3,000/- ರೂ,5) ನಗದು ಹಣ, 10,000/- ರೂ. ಹೀಗೆ ಒಟ್ಟು 6,07,000/-ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದು ಪ್ರಕರಣದ ತನಿಖೆಯನ್ನು ಮುಂದುವರಿಸಿರುತ್ತಾರೆ.


Share It

You cannot copy content of this page