ಬೆಂಗಳೂರು: ಲವ್ ಜಿಹಾದ್‌ಗೆ ಬಲಿಯಾಗಿ ಯುವಕನ ಜತೆಗೆ ಬೆಂಗಳೂರಿಗೆ ಬಂದಿದ್ದ ಯುವತಿಯನ್ನು ಬೆಳಗಾವಿ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟದಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣದ ಬೆನ್ನುಹತ್ತಿದ ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿದ್ದು, ಪಿಯುಸಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಆಕೆಯನ್ನು ಅಪಹರಿಸಿರುವ ಸಂಬAಧ ಸಾಹಿಲ್ ಎಂಬಾತನ ಮೇಲೆ ಪ್ರಕರಣ ದಾಖಲಾಗಿತ್ತು.
ಮೂಲಗಳ ಪ್ರಕಾರ ಶಾಹಿಲ್ ಎಂಬಾತ ತನ್ನ ಸಂಬಂಧಿಕರ ಹುಡುಗಿಯ ಸಹಾಯದಿಂದ ಅಪ್ರಾಪ್ತ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ. ಅನಂತರ ಆಕೆಯೊಂದಿಗೆ ಮರ‍್ನಾಲ್ಕು ಬಾರಿ ಹೋಟೆಲ್‌ಗೆ ಕರೆದೊಯ್ದಿದ್ದ. ಹೀಗೆ ಪರಿಚಯ, ಸ್ನೇಹವಾಗಿ ಬೆಳೆದು ಪ್ರೀತಿಯ ನಾಟಕ ಮಾಡಿ, ಆಕೆಯನ್ನು ಬೆಂಗಳೂರಿಗೆ ಅಪಹರಿಸಿಕೊಂಡು ಹೋಗಿದ್ದ ಎನ್ನಲಾಗಿದೆ.
ಬಾಲಕಿಯನ್ನು ಮೈಂಡ್ ವಾಶ್ ಮಾಡಿದ್ದ ಸಾಹಿಲ್, ಮುಂದೊAದು ದಿನ ಭಾರತವೇ ಮುಸ್ಲಿಂ ರಾಷ್ಟçವಾಗಲಿದೆ. ಹೀಗಾಗಿ, ನೀನು ಇಸ್ಲಾಂ ಧರ್ಮಕ್ಕೆ ಮತಾಂತರವಾಗು. ನಾನು ನಿನ್ನನ್ನು ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಬಾಲಕಿಗೆ ಭರವಸೆ ನೀಡಿದ್ದ ಎನ್ನಲಾಗಿದೆ. ಆತ ಹೀಗೆ ಮಾಡಿದ್ದ ವಾಟ್ಸಾಪ್ ಸಂದೇಶಗಳೊAದಿಗೆ ಪೋಷಕರು ಈ ಆರೋಪ ಮಾಡುತ್ತಿದ್ದಾರೆ.
ಬಾಲಕಿಗೆ ಜ.18ಕ್ಕೆ 18 ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ, ಆಕೆಯನ್ನು ಫ್ಲಾನ್ ಮಾಡಿ ಬೆಂಗಳೂರಿಗೆ ಕರೆತಂದು ಇಟ್ಟಿದ್ದ ಎನ್ನಲಾಗಿದೆ. ಆದರೆ, ದೂರಿನ ಹಿನ್ನೆಲೆಯಲ್ಲಿ ಬೆನ್ನುಬಿದ್ದ ಪೊಲೀಸರು, ಬೆಂಗಳೂರಿನಲ್ಲಿ ಯುವತಿಯನ್ನು ರಕ್ಷಿಸಿದ್ದು, ಸಾಹಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

