ರಾಜಕೀಯ ಸುದ್ದಿ

ಬೆಂಗಳೂರು ಪದವೀಧರ ಕ್ಷೇತ್ರ: ರಾಮೋಜಿಗೌಡಗೆ ಗೆಲುವು

Share It


ಬೆಂಗಳೂರು: ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯ ಮತೆಣಿಕೆ ಕಾರ್ಯ ಮುಗಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಅ.ದೇವೇಗೌಡ ೨೪,೮೮೮ ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ೩೬,೭೨೯ ಮತ ಪಡೆದು ಹಾಲಿ ಸದಸ್ಯ ದೇವೇಗೌಡರ ವಿರುದ್ಧ ಗೆಲುವಿನ ನಗೆ ಬೀರಿದರು. ಇಲ್ಲಿ ಚಲಾವಣೆಯಾದ ೮೦,೦೮೦ ಮತಗಳ ಎಣಿಕೆ ಆರು ಸುತ್ತುಗಳಲ್ಲಿ ನಡೆದಿದ್ದು, ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ೮,೪೮೨ ಮತಗಳು ಅಸಿಂಧುಗೊAಡಿವೆ.

ತ್ರಿಕೋನ ಸ್ಪರ್ಧೆ ಏರ್ಪಟ್ಟ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ೮,೯೦೯ ಮತಗಳಿಂದ ಗೆದ್ದಿದ್ದು ಹಾಲಿ ಸದಸ್ಯ ನಾರಾಯಣಸ್ವಾಮಿಗೆ ಸೋಲಾಗಿದೆ. ಇಲ್ಲಿ ಚಲಾವಣೆಯಾದ ೨೪,೧೦೬ ಮತಗಳ ಎಣಿಕೆ ಏಳು ಸುತ್ತುಗಳಲ್ಲಿ ನಡೆದಿದ್ದು, ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಗೆಲುವು ಸಾಧಿಸಿದ್ದಾರೆ. ೭೦೪ ಮತಗಳು ತಿರಸ್ಕೃತಗೊಂಡಿವೆ.

ಈ ಎರಡೂ ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿದ್ದವು. ಇದೀಗ ಎರಡೂ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿದ್ದು ಕಾಂಗ್ರೆಸ್ ಪಾಲಾಗಿವೆ. ಬಿಜೆಪಿ ಅಭ್ಯರ್ಥಿ ವೈ.ಎ ನಾರಾಯಣಸ್ವಾಮಿ ೭,೧೪೨ ಮತ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ, ಪಕ್ಷೇತರ ಅಭ್ಯರ್ಥಿ ವಿನೋದ್ ಶಿವರಾಜ್ ೬,೮೯೪ ಮತ ಪಡೆದಿದ್ದಾರೆ.


Share It

You cannot copy content of this page