ಅಪರಾಧ ಸುದ್ದಿ

ಬೆಂಗಳೂರು: ಕೆಲಸದಿಂದ ತೆಗೆದುಹಾಕಿದ್ದಕ್ಕೆ ಮ್ಯಾನೇಜರ್‌ಗೆ ಚುಚ್ಚಿ ಕೊಲೆ

Share It

ಬೆಂಗಳೂರು: ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದಕ್ಕೆ ಮ್ಯಾನೇಜರ್ ವಿರುದ್ಧ ರೊಚ್ಚಿಗೆದ್ದ ಯುವಕನೊಬ್ಬ ಮ್ಯಾನೇಜರ್‌ಗೆ ಚುಚ್ಚಿ ಕೊಲೆ ಮಾಡಿರುವ ಘಟನೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ರಾಹುಲ್ (38) ಕೊಲೆಯಾದ ದುರ್ದೈವಿ. ಈತ ಪೀಣ್ಯ ಎರಡನೇ ಹಂತದ ತಿಗಳರ ಪಾಳ್ಯದಲ್ಲಿರುವ ಪವರ್ ಪ್ಲಾಸ್ಟಿಕ್ ಫ್ರೈ ಲಿಮಿಟೆಡ್ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದ, ಆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕೆಲಸದಿಂದ ವಜಾಗೊಳಿಸಿದ ಕಾರಣಕ್ಕೆ ಕೊಲೆ ನಡೆದಿದೆ.

ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸರು ಭೇಟಿ ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ನಡೆಸಿದಾತನನ್ನು ಹನುಮಂತಪ್ಪ ಎಂದು ಗುರುತಿಸಲಾಗಿದೆ.


Share It

You cannot copy content of this page