ಉಪಯುಕ್ತ ಸುದ್ದಿ

ಆಗಸ್ಟ್‌ 1 ರಿಂದ ಬೆಸ್ಕಾಂ ಬಿಲ್‌ ಪಾವತಿಯ ಎಟಿಪಿ ಸೇವೆ ಸ್ಥಗಿತ

Share It

ಬೆಂಗಳೂರು: ವಿದ್ಯುತ್‌ ಬಿಲ್‌ ಪಾವತಿಗೆ ಬೆಸ್ಕಾಂ ಕಚೇರಿಗಳಲ್ಲಿರುವ ಎಟಿಪಿ (ಎನಿ ಟೈಮ್‌ ಪೇಮೆಂಟ್‌) ಪಾವತಿ ಯಂತ್ರದ ಸೇವೆಯನ್ನು ಆಗಸ್ಟ್‌ 1 ರಿಂದ ಸ್ಥಗಿತಗೊಳಿಸಲಾಗುವುದು.

ಬೆಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿರುವ ನಗದು ಪಾವತಿ ಕೇಂದ್ರಗಳು, ಬೆಂಗಳೂರು ಒನ್‌, ಬೆಸ್ಕಾಂ ವ್ಯಾಪ್ತಿಯಲ್ಲಿರುವ ಕರ್ನಾಟಕ ಒನ್‌, ಆನ್‌ ಲೈನ್‌ ಪಾವತಿ ವಿಧಾನಗಳಾದ ಬೆಸ್ಕಾಂ ವೆಬ್‌ ಸೈಟ್‌, ಬೆಸ್ಕಾಂ ಮಿತ್ರ ಆ್ಯಪ್‌ ಮೂಲಕ ಗ್ರಾಹಕರು ವಿದ್ಯುತ್‌ ಬಿಲ್‌ ಪಾವತಿಸಬಹುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿದ್ಯುತ್‌ ಬಿಲ್‌ ನೀಡುವ ಸ್ಪಾಟ್‌ ಬಿಲ್ಲಿಂಗ್‌ ಡಿವೈಸ್‌, ಭಾರತ್‌ ಬಿಲ್‌ ಪೇಮೆಂಟ್‌ ಸಿಸ್ಟಮ್‌ (ಬಿಬಿಪಿಎಸ್‌), ನೆಫ್ಟ್‌, ಇಸಿಎಸ್‌ ಹಾಗೂ ಇತರೆ ಮೂಲಕ ಕೂಡ ಬಿಲ್‌ ಪಾವತಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ.

ಅಲ್ಲದೇ, ಯುಪಿಐ ಪಾವತಿ (ಗೂಗಲ್‌ ಪೇ, ಫೋನ್‌ ಪೇ, ಪೇಟಿಎಂ,ಭೀಮ್ ಮುಂತಾದ ಆ್ಯಪ್) ಮೂಲಕವೂ ವಿದ್ಯುತ್‌ ಬಿಲ್‌ಗಳನ್ನು ಪಾವತಿಸಬಹುದಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.


Share It

You cannot copy content of this page