ಸುದ್ದಿ

ಪತ್ರಕರ್ತ ಅಯ್ಯಣ್ಣ ಮಾಸ್ಟರ್ ಗೆ ‘ಭಾರತ ವೈಭವ’ ಬೆಸ್ಟ್ ರಿಪೋರ್ಟರ್ ಅವಾರ್ಡ್

Share It

ಬೆಂಗಳೂರು: ಬೆಂಗಳೂರಿನ ದಾಸರಹಳ್ಳಿಯ ಪತ್ರಕರ್ತ ಹಾಗೂ ಶಿಕ್ಷಕ ಅಯ್ಯಣ್ಣ ಬಡಿಗೇರ ಅವರಿಗೆ ಭಾರತ ವೈಭವ ಬೆಸ್ಟ್ ರಿಪೋರ್ಟರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬೆಳಗಾವಿ ಮೂಲದ ಭಾರತ ವೈಭವ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಅವರಿಗೆ ಪತ್ರಿಕೆಯ 25 ನೇ ವಾರ್ಷಿಕೋತ್ಸವದ ಅಂಗವಾಗಿ ನೀಡುವ ಬೆಸ್ಟ್ ರಿಪೋರ್ಟರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ಜುಲೈ21 ರಂದು ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಆರ್.ಬಿ. ತಿಮ್ಮಾಪುರ, ಶಾಸಕ ಆಸೀಫ್ ಸೇಠ್, ಪತ್ರಿಕೆಯ ಸಂಪಾದಕರಾದ ಪ್ರಶಾಂತ್ ರಾವ್ ಭಾಗವಹಿಸಲಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪತ್ರಕರ್ತರ ಸ್ನೇಹಮಿಲನ ಕಾರ್ಯಕ್ರಮ ಇದಾಗಿದ್ದು, ನಾಡಿನ ಅನೇಕ ಹೆಸರಾಂತ ಪತ್ರಕರ್ತರು ಭಾಗವಹಿಸಲಿದ್ದಾರೆ. ಜತೆಗೆ ಪತ್ರಿಕೆಯ ಏಳಿಗೆಗೆ ಶ್ರಮಿಸಿದ ಅನೇಕರನ್ನು ಸನ್ಮಾನಿಸಲಾಗುತ್ತದೆ.


Share It

You cannot copy content of this page