ಯುವಕ ಮತ್ತು ಯುವತಿಯರು ದೇಹದ ವಿವಿಧ ಅಂಗಾಂಗಗಳ ಮೇಲೆ ಚಿತ್ರ-ವಿಚಿತ್ರ ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿಬಿಟ್ಟಿದೆ. ಆದರೆ ಈ ರೀತಿ ಹಚ್ಚೆ ಹಾಕಿಸಿಕೊಳ್ಳುವುದಂದ ಭಯಾನಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಪರಿಣತರಲ್ಲದವರು ಹಚ್ಚೆ ಹಾಕುವಾಗ ಕಲುಷಿತ ಸೂಜಿಗಳನ್ನು ಬಳಸುವುದರಿಂದ ಎಚ್‌ಐವಿ ಹೆಪಟೈಟಿಸ್ ಬಿ, ಸಿ ಮತ್ತು ಕಾನ್ಸರ್‌ನಂತ ರೋಗಗಳು ಹರಡುವ ಅಪಾಯವಿದೆ ಎಂದು ಶಾಲಿಮಾರ್ ಬಾಗ್‌ನ ಪೋರ್ಟಿಸ್ ಆಸ್ಪತ್ರೆಯ ಮುಖ್ಯಸ್ಥ ಸುಹೇಲ್ ಖುರೇಷಿ ತಿಳಿಸಿದ್ದಾರೆ.
ಹಚ್ಚೆ ಹಾಕಿಸಿಕೊಂಡ ವ್ಯೆಕ್ತಿಗಳು ದುಗ್ಧರಸ ವ್ಯೆವಸ್ಥೆಯ ಮೇಲೆ ಪರಿಣಾಮ ಬೀರುವ ಕಾನ್ಸರ್
ಅಪಾಯ ಎದುರಿಸುತ್ತಾರೆ ಎಂದು ಸ್ವೀಡನ್‌ನ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನ ಬಹಿರಂಗಪಡಿಸಿದೆ.
