ಅಪರಾಧ ರಾಜಕೀಯ ಸುದ್ದಿ

ಭವಾನಿ ರೇವಣ್ಣ ಜಾಮೀನು ಭವಿಷ್ಯ ಇಂದು ನಿರ್ಧಾರ

Share It

ಬೆಂಗಳೂರು: ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಮೇಲಿನ ವಿಚಾರಣೆಯ ಆದೇಶವನ್ನು ಹೈಕೋರ್ಟ್ ಇಂದು ಪ್ರಕಟ ಮಾಡಲಿದ್ದು, ಭವಾನಿ ಭವಿಷ್ಯ ಏನಾಗಲಿದೆ ಎಂಬುದು ನಿರ್ಧಾರವಾಗಲಿದೆ.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೇಲಿನ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ್ದಕ್ಕೆ ಸಂಬAಧಿಸಿದAತೆ ದಾಖಲಾಗಿರುವ ಪ್ರಕರಣದಲ್ಲಿ ಭವಾನಿ ಅವರ ಬಂಧನಕ್ಕೆ ಎಸ್‌ಐಟಿ ಸಿದ್ಧತೆ ನಡೆಸಿತ್ತು. ಇದಕ್ಕಾಗಿ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಕೆಳ ನ್ಯಾಯಾಲಯದಲ್ಲಿ ಭವಾನಿ ಅವರ ಜಾಮೀನು ಅರ್ಜಿ ತಿರಸ್ಕಾರವಾಗಿದ್ದು, ಹೈಕೋರ್ಟ್ನಲ್ಲಿ ಅಂತಿಮವಾಗಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಹೈಕೋರ್ಟ್ ತಾತ್ಕಾಲಿಕ ಜಾಮೀನು ನೀಡಿ, ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿತ್ತು. ಅಂತಿಮ ಆದೇಶವನ್ನು ಜೂನ್ ೧೮ಕ್ಕೆ ಕಾಯ್ದಿರಿಸಿತ್ತು.

ಇಂದು ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇಂದು ಆದೇಶವನ್ನು ಪ್ರಕಟ ಮಾಡಲಿದ್ದು, ಆದೇಶದ ಆಧಾರದ ಮೇಲೆ ಭವಾನಿ ರೇವಣ್ಣ ಅವರ ಭವಿಷ್ಯ ನಿರ್ಧಾರವಾಗಲಿದೆ.

ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ, ಭವಾನಿ ಸಂಕಷ್ಟದಿAದ ಪಾರಾಗಲಿದ್ದಾರೆ. ಒಂದು ವೇಳೆ ಜಾಮೀನು ಸಿಗದಿದ್ದರೆ, ಈಗ ನೀಡಿರುವ ಮಧ್ಯಂತರ ನಿರೀಕ್ಷಣಾ ಜಾಮೀನು ಕೂಡ ರದ್ದಾಗಲಿದೆ. ಆಗ ಅನಿವಾರ್ಯವಾಗಿ ಎಸ್‌ಐಟಿ ಭವಾನಿ ರೇವಣ್ಣ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಿದೆ. ಹೀಗಾಗಿ, ಈ ತೀರ್ಪು ಭವಾನಿ ರೇವಣ್ಣ ಪಾಲಿಗೆ ನಿರ್ಣಾಯಕವಾಗಲಿದೆ.

ಈಗಾಗಲೇ ಭವಾನಿ ಅವರ ಪತಿ ಮಾಜಿ ಸಚಿವ ರೇವಣ್ಣ ಎಸ್‌ಐಟಿಯಿಂದ ಬಂಧನಕ್ಕೊಳಗಾಗಿ, ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಇದೀಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಜತೆಗೆ, ಭವಾನಿ ಅವರ ಪುತ್ರ ಪ್ರಜ್ವಲ್ ರೇವಣ್ಣ, ಜೈಲು ಪಾಲಾಗಿದ್ದಾರೆ. ಅವರಿಗೆ ಸಧ್ಯಕ್ಕೆ ಬಹುತೇಕ ಜಾಮೀನು ಸಿಗುವುದು ಕೂಡ ಅನುಮಾನ. ಈ ನಡುವೆ ಭವಾನಿ ಅವರಿಗೂ ಜಾಮೀನು ಸಿಗದೆ ಜೈಲು ಸೇರುವ ಸ್ಥಿತಿ ನಿರ್ಮಾಣವಾದರೆ, ರೇವಣ್ಣರ ಇಡೀ ಕುಟುಂಬ ಜೈಲುಪಾಲಾದಂತಾಗುತ್ತದೆ.


Share It

You cannot copy content of this page