ಬೀದರ್ : ಬೀದರ್ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಬಿರುಗಾಳಿ ಸಹಿತ ಮಳೆ ಸುರಿಯಿತು. ಜನವಾಡ, ಯರನಳ್ಳಿ, ಇಸ್ಲಾಂಪುರ, ಬಂಪಳ್ಳಿ, ಸಾಂಗ್ವಿ, ದದ್ದಾಪುರ ಮೊದಲಾದ ಕಡೆಗಳಲ್ಲಿ ಮಧ್ಯಾಹ್ನ ಒಂದೂವರೆ ತಾಸು ಮಳೆಯಾಯಿತು.
ಬಿರುಗಾಳಿಗೆ ಇಸ್ಲಾಂಪುರ ಗ್ರಾಮದ ಭೀಮಣ್ಣ ಕೌಟಗೆ ಎಂಬುವರ ಮನೆ ಅಂಗಳದಲ್ಲಿನ ಮರ ಮನೆ ಮೇಲೆ ಬಿದ್ದಿದೆ. ಅನೇಕ ಮನೆಗಳ ಪತ್ರಾಸಗಳು ಹಾರಿ ಹೋಗಿವೆ. ಪತ್ರಾಸುಗಳು ಹಾರಿದ್ದರಿಂದ ಮನೆಯಲ್ಲಿನ ದವಸ ಧಾನ್ಯಗಳಿಗೆ ಹಾನಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಜನವಾಡ-ಯರನಳ್ಳಿ ಮಾರ್ಗದಲ್ಲಿ ಹತ್ತಾರು ಮರಗಳ ಟೊಂಗೆಗಳು ಮುರಿದು ಬಿದ್ದಿವೆ.