ಭಾರತೀಯ ಸೇನೆಯಿಂದ ಬಹುನಿರೀಕ್ಷಿತ ಅಗ್ನಿ ವೀರ ಸೈನಿಕರ ಆಯ್ಕೆ ಪಟ್ಟಿ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಈ ಬಗ್ಗೆ ಭಾರತೀಯ ಸೇನೆಯ ಮೂಲಗಳಿಂದ ಮಾಹಿತಿ ಹೊರ ಬಿದ್ದಿದ್ದು, ನಿಖರ ದಿನಾಂಕ ತಿಳಿದಿಲ್ಲ. ಆದರೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಹೀಗಾಗಿ ರಿಸಲ್ಟ್ ನೋಡುವುದು, ಡೌನ್‌ಲೋಡ್ ಮಾಡುವುದು ಹೇಗೆ ಎಂಬುದರ ಸಂಪೂರ್ಣ ವಿವರವನ್ನ ನಿಮ್ಮ ವೈಟ್ ಪೇಪರ್ ನೀಡುತ್ತಿದೆ. ಈ ಸ್ಟೆಪ್ ಫಾಲೋ ಮಾಡಿದ್ರೆ ಸಾಕು ನೀವು ಸುಲಭವಾಗಿ ರಿಸಲ್ಟ್ ನೋಡಬಹುದಾಗಿದೆ..
ಅಗ್ನಿ ವೀರ ಸೈನಿಕ ಹುದ್ದೆಗೆ ಕಾಮನ್ ಎಂಟ್ರೆನ್ಸ್ ಎಕ್ಸಮ್ ಬರೆದವ್ರು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ joinindianarmy.nic.in ನಲ್ಲಿ ನೋಡಬಹುದಾಗಿದೆ.
ಅಗ್ನಿ ವೀರ ಸೈನಿಕರ ಹುದ್ದೆಗೆ ಜೂನ್ 30ರಿಂದ ಜುಲೈ 10ರವರೆಗೆ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ ಒಟ್ಟು 13 ಭಾಷೆಗಳಲ್ಲಿ ಕಾಮನ್ ಎಂಟ್ರೆನ್ಸ್ ಎಕ್ಸಾಮ್(ಅಇಇ) ನಡೆಸಲಾಗಿತ್ತು. ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಲಾಗಿದ್ದು, ಅಬ್ಜೆಕ್ಟಿವ್-ಟೈಪ್ ಮಲ್ಟಿಪಲ್ ಚಾಯ್ಸ್ ಕ್ವೆಶನ್‌ಗಳಿಗೆ ಅಭ್ಯರ್ಥಿಗಳು ಉತ್ತರ ಬರೆದಿದ್ದರು. 1 ತಾಸಿನಲ್ಲಿ 50 ಪ್ರಶ್ನೆಗಳಿಗೆ ಹಾಗೂ 2 ತಾಸಿನಲ್ಲಿ 100 ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರ ಬರೆದಿದ್ದಾರೆ.
ರಿಸಲ್ಟ್ ಡೌನ್‌ಲೋಡ್ ಮಾಡುವುದು ಹೇಗೆ?
- ಇಂಡಿಯನ್ ಆರ್ಮಿ ಅಫೀಷಿಯಲ್ ವೆಬ್‌ಸೈಟ್ http://joinindianarmy.nic.in ಗೆ ಹೋಗಿ.
- ಹೋಮ್ ಪೇಜ್‌ನಲ್ಲಿರುವ ಇಂಡಿಯನ್ ಆರ್ಮಿ ಅಗ್ನಿವೀರ್ ರಿಸಲ್ಟ್ 2025 ಲಿಂಕ್ ಒತ್ತಿ.
- ಲಾಗಿನ್ ಡಿಟೇಲ್ಸ್ ಹಾಕಿ.
- ನಂತರ ಸಬ್ಮಿಟ್ ಕೊಟ್ಟರೆ ರಿಸಲ್ಟ್ ಓಪನ್ ಆಗುತ್ತೆ, ನಂತರ ನೀವು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದು.
- ಅಗತ್ಯ ಉಪಯೋಗಕ್ಕಾಗಿ ರಿಸಲ್ಟ್‌ನ ಹಾರ್ಡ್ ಕಾಪಿ ಸೇವ್ ಮಾಡಿಕೊಳ್ಳೋದನ್ನು ಮರೆಯಬೇಡಿ.
ಹೆಚ್ಚಿನ ವಿವರಗಳಿಗಾಗಿ ನೀವು ಇಂಡಿಯನ್ ಆರ್ಮಿ ಅಫೀಷಿಯಲ್ ವೆಬ್‌ಸೈಟ್ ವಿಸಿಟ್ ಮಾಡಬಹುದು.