ಶ್ರವಣಬೆಳಗೊಳ: ಶ್ರವಣಬೆಗೊಳ ಕ್ಷೇತ್ರದ ಜನಪ್ರಿಯ ಶಾಸಕ ಸಿ.ಎನ್ ಬಾಲಕೃಷ್ಣ ರವರ ಜನುಮದಿನದ ಅಂಗವಾಗಿ ಶ್ರವಣಬೆಳಗೊಳ ಪಟ್ಟಣದಲ್ಲಿ ಬೈಕ್ ರೇಸ್ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದ ದ್ವಿಚಕ್ರದ ಮೊಟೋಕ್ರಾಸ್ ಅಥವಾ ಆಟೋಕ್ರಾಸ್ ಅನ್ನು ಶ್ರವಣಬೆಳಗೊಳ ಹೋಬಳಿ ಬಿ.ಚೋಳೆನಹಳ್ಳಿ ಗ್ರಾಮದ ದಿನೇಶ್ ಗೌಡ ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಮೋಟೋಕ್ರಾಸ್ ರೇಸ್‌ನಲ್ಲಿ ಕೇರಳ, ಮುಂಬೈ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ಶಾಸಕರಾದ ಸಿ. ಎನ್. ಬಾಲಕೃಷ್ಣ ಅವರು ಬೈಕ್ ಓಡಿಸುವ ಮೂಲಕ ಹಾಗೂ ಹುಟ್ಟು ಹಬ್ಬದ ಹಂಗವಾಗಿ ಕೆಕ್ ಕತ್ತರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ದಿನೇಶ್ ಗೌಡ ಸೇರಿದಂತೆ ಹಲವಾರು ಜೆ.ಡಿ.ಎಸ್ ಮುಖಂಡರು ಹಾಜರಿದ್ದರು.

