ಬೆಂಗಳೂರು: ಹೊಸಕೋಟೆ ಫ್ಲೈಓವರ್ ಮೇಲೆ ಪುಂಡರು ವ್ಹೀಲಿಂಗ್ ಮಾಡುತ್ತಾ ನಡುರಸ್ತೆಯಲ್ಲಿಯೇ ಅಟ್ಟಹಾಸ ಮೆರೆದಿರುವ ಘಟನೆ ನಡೆದಿದೆ.
ನಲವತ್ತು ತಂಡ ಸೇರಿ ಬೈಕ್ ರೇಸ್ ಮಾದರಿಯ ವ್ಹೀಲಿಂಗ್ ಕಾಂಪಿಟೇಷನ್ ನಡೆಸಿದ್ದವು ಎನ್ನಲಾಗಿದೆ. ಇಲ್ಲಿ ಅನೇಕ ಯುವಕರು ಭಾಗವಹಿಸಿ, ವ್ಹೀಲಿಂಗ್ ಮಾಡುತ್ತಾ ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ತೊಂದರೆ ಕೊಟ್ಟಿರುವ ಘಟನೆ ನಡೆದಿದೆ.
ಇಂತಹ ಘಟನೆ ನಡೆದರೂ, ಪೊಲೀಸರ ಗಮನಕ್ಕೆ ಈ ಪ್ರಕರಣ ಬಂದಿಲ್ಲ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಹೀಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ನಂತರವಾದರೂ ಪೊಲೀಸರು ಪುಂಡರ ಮೇಲೆ ಕ್ರಮ ತೆಗೆದುಕೊಂಡು ಅವರನ್ನು ಮಟ್ಟಹಾಕುತ್ತಾರಾ ಕಾದು ನೋಡಬೇಕಿದೆ.

