ಬೆಂಗಳೂರು: ಅರುಣಾಚಲ ಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮುಂದುವರೆದಿದೆ. ಅರುಣಾಚಲ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವು 44 ಸ್ಥಾನಗಳನ್ನು ಪಡೆಯುವ ಮೂಲಕ ಭಾರಿ ಬಹುಮತ ಪಡೆದಿದೆ.
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 44 ಸ್ಥಾನಗಳನ್ನು ಗೆದ್ದ ನಂತರ, ಬಿಜೆಪಿ ಪ್ರಸ್ತುತ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. NPEP 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ರಾಜ್ಯದಲ್ಲಿ ಬಹುಮತ ಪಡೆಯಲು ಯಾವುದೇ ಪಕ್ಷಕ್ಕೆ 31 ಸ್ಥಾನಗಳು ಬೇಕು.
ಹೀಗಾಗಿ ಬಿಜೆಪಿ ಮತ್ತೆ ಅರುಣಾಚಲ ಪ್ರದೇಶದಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದೆ.

