ಹಾಸನ:ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಹೋಳೇನರಸೀಪುರದ ಬಿಜೆಪಿ ಮುಖಂಡ ದೇವರಾಜೇಗೌಡ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ದೇವರಾಜೇಗೌಡ, ನನ್ನ ಮೇಲಿನ ಪ್ರಕರಣ, ಬಂಧನ ಇದೆಲ್ಲವೂ ಯಾರ ಕೈವಾಡ ಎಂಬುದು ಇಡೀ ರಾಜ್ಯಕೆಕ ಗೊತ್ತಿದೆ. ಕಾಲವೇ ಇದಕ್ಕೆಲ್ಲ ಉತ್ತರ ನೀಡಲಿದೆ. ತನಿಖೆ ನಡೆಯುತ್ತಿರುವ ಕಾರಣದಿಂದ ನಾನು ಈ ಬಗ್ಗೆ ಹೆಚ್ಚೇನು ಮಾತನಾಡುವುದಿಲ್ಲ ಎಂದಿದ್ದಾರೆ.
ದೇವರಾಜೇಗೌಡ, ಪೆನ್‌ಡ್ರೆöÊವ್ ಬಿಡುಗಡೆಯ ಕುರಿತು ಸುಳಿವು ನೀಡಿದ್ದರು, ಜತೆಗೆ, ಪೆನ್‌ಡ್ರೆöÊವ್ ಹಂಚಿಕೆಯಲ್ಲಿ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಆರೋಪ ಮಾಡಿದ್ದರು. ಅನಂತರ ಅವರನ್ನು ಚಿತ್ರದುರ್ಗದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದಲ್ಲಿ ಬಂಧನ ಮಾಡಲಾಗಿತ್ತು.
ಪ್ರಜ್ವಲ್ ರೇವಣ್ಣ ಪ್ರಕರಣ, ಪೆನ್ ಡ್ರೆöÊವ್ ಪ್ರಕರಣಗಳಲ್ಲಿ ದೇವರಾಜೇಗೌಡ ಹೆಸರು ಥಳುಕು ಹಾಕಿಕೊಂಡಿದೆ. ಇದರ ಜತೆಗೆ, ಮಹಿಳೆಯೊಬ್ಬರು ದೇವರಾಜೇಗೌಡ ವಿರುದ್ಧ ಹೊಳೇನರಸೀಪುರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರು.