ಇಂದು ಸಂಸತ್ ಭವನದ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಕಚೇರಿಯಲ್ಲಿ ಬಿಜೆಪಿ ನಾಯಕರಾದ ಪ್ರಹ್ಲಾದ್ ಜೋಷಿ, ರಾಧಮೋಹನ್ ದಾಸ್, ಬಿವೈ ವಿಜಯೇಂದ್ರ ಅವರು ಭೇಟಿಯಾದರು.
ಭೇಟಿ ಮಾಡಿದ ಬಿಜೆಪಿ ನಾಯಕರು ಪಾದಯಾತ್ರೆ ಬಗ್ಗೆ ಮಹತ್ವದ ಚರ್ಚೆ ನೆಡೆಸಿದ್ದಾರೆ ಎಂಬುದು ತಿಳಿದುಬಂದಿದೆ. ಸಭೆಯಲ್ಲಿ ಜೆಡಿಎಸ್ ನಾಯಕರಾದ ಬಂಡೆಪ್ಪ ಕಾಶೆಂಪೂರ್, ಮಲ್ಲೇಶ್ ಬಾಬು ಸಹ ಉಪಸ್ಥಿತರಿದ್ದರು.
ನಿನ್ನೆ ಕುಮಾರಸ್ವಾಮಿಯವರು ಬಿಜೆಪಿಯವರ ಪಾದಯಾತ್ರೆಗೆ ನಮ್ಮ ಬೆಂಬಲವಿಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ್ದರು. ಪ್ರೀತಮ್ ಗೌಡ ವಿರುದ್ದ ನೇರವಾಗಿ ಸಿಡಿದೆದ್ದು ಯಾವುದೆ ನೈತಿಕ ಬೆಂಬಲವು ಸಹ ಇಲ್ಲವೆಂದು ಸ್ಪಷ್ಟವಾಗಿ ಮಾಧ್ಯಮದ ಮುಖಾಂತರ ಹೇಳಿದ್ದರು. ಅದರೆ ಇಂದು ಬಿಜೆಪಿ ನಾಯಕರೊಂದಿಗಿನ ಚರ್ಚೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.