ಅಥಣಿ: ಪಾದಯಾತ್ರೆೆ ಹಾಗೂ ರಾಜ್ಯಪಾಲರ ಮೂಲಕ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ನಡೆಸುತ್ತಿರುವ ಬಿಜೆಪಿ- ಜೆಡಿಎಸ್ ಹುನ್ನಾರ ಫಲಿಸುವುದಿಲ್ಲ ಎಂದು ನ್ಯಾಯವಾದಿ, ಕಾಂಗ್ರೆೆಸ್ ಮುಖಂಡ ಸುನೀಲ್ ಸಂಕ ಹೇಳಿದ್ದಾಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದರುವ ಅವರು, ರಾಜ್ಯದ ಮತದಾರರು ಕಾಂಗ್ರೆೆಸ್‌ಗೆ ಸ್ವಷ್ಟ ಬಹುಮತ ಕೊಟ್ಟು ಅಧಿಕಾರ ನೀಡಿದ್ದಾರೆ. ಆದರೆ ಈ ಸರಕಾರವನ್ನು ಅಸ್ಥಿರಗೊಳಿಸಿದರೆ ಇಡೀ ರಾಷ್ಟ್ರದಲ್ಲಿ ಕಾಂಗ್ರೆೆಸ್ ಬಲವನ್ನು ಕುಗ್ಗಿಸಬಹುದು ಎಂಬ ಹುನ್ನಾಾರ ನಡೆಯುತ್ತಿದೆ. ಇದಕ್ಕೆೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ರಾಜ್ಯ ಕಂಡ ಅಪ್ರತಿಮ ಜನನಾಯಕ, ಹೆಮ್ಮೆಯ, ನಿಷ್ಕಳಂಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖಕ್ಕೆೆ ಮಸಿ ಬಳೆಯುವ ಉದ್ದೇಶದಿಂದಲೇ ಈ ಡೋಂಗಿ ಪಾದಯಾತ್ರೆೆ ಹಮ್ಮಿಕೊಂಡಿದ್ದಾಾರೆ. ಇದರಿಂದ ವಾಪಸ್ ಅವರ ಕೈಗೇ ಮಸಿ ಅಂಟಿಕೊಳ್ಳುತ್ತದೆ. ಯಾವುದೇ ಆರೋಪಗಳಿಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯರ ಅವರ ವಿರುದ್ಧ ಸಂಬಂಧಪಡದ ವಿಷಯಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮುಡಾ ನಿವೇಶನಗಳ ಹಂಚಿಕೆ ಬಿಜೆಪಿ ಸರಕಾರದಲ್ಲಿ ನಡೆದಿದೆ. ರಾಜ್ಯಪಾಲರು ಅಂದಿನ ಮುಖ್ಯಮಂತ್ರಿಗಳು, ನಾಗರಾಭಿವೃದ್ಧಿ ಸಚಿವರು ಮತ್ತು ಅಧಿಕಾರಿಗಳ ಮೇಲೆ ಪ್ರಾಸಿಕ್ಯುಷನ್‌ಗೆ ಪರವಾನಿಗೆ ನೀಡಬೇಕೇ ವಿನಾಃ ಸಿದ್ದರಾಮಯ್ಯ ಅವರ ಮೇಲೆ ಅಲ್ಲ.
– ಸುನೀಲ್ ಸಂಕ
ನ್ಯಾಯವಾದಿ, ಕಾಂಗ್ರೆೆಸ್ ಮುಖಂಡ