ಧಾರವಾಡ: ಬಿಜೆಪಿ ಕಾರ್ಯಕರ್ತೆ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬಂಧಿಸಲು ಹೋಗಿದ್ದ ವೇಳೆ ಆಕೆಯೇ ನಾಲ್ವರು ಪೊಲೀಸರಿಗೆ ಕಚ್ಚಿ ಗಾಯಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಮೇಲೆ ಧಾರವಾಡ ಪೊಲೀಸರು ಹಲ್ಲೆ ನಡೆಸಿದ್ದಾರೆ. ಬಂಧನ ಮಾಡುವಾಗ ಬಟ್ಟೆಯನ್ನೇ ಕಳಚಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಆದರೆ, ಆಕೆಯ ಮೇಲೆ ೧೯ ಪ್ರಕರಣಗಳಿದ್ದು, ಆಕೆ ಬಂಧಿಸಲು ಹೋಗಿದ್ದ ಪೊಲೀಸರಿಗೆ ಕಚ್ಚುವ ಜತೆಗೆ, ವಾಹನಕ್ಕೆ ಹತ್ತಿಸುವಾಗ ಆಕೆಯೇ ಬಟ್ಟೆ ಬಿಚ್ಚಿಕೊಂಡಿದ್ದಳು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಜ.೧ರಂದು ಮತದಾರರ ಸಮೀಕ್ಷೆ ವೇಳೆ ಚಾಲುಕ್ಯ ನಗರದಲ್ಲಿ ಗಲಾಟೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬAಧ ಜ.೫ರಂದು ಬಂಧಿಸಲು ಕೇಶ್ವಾಪುರ ಪೊಲೀಸರು ಹೋಗಿದ್ದರು. ಈ ವೇಳೆ ಆಕೆ ನಾಲ್ವರು ಪೊಲೀಸರಿಗೆ ಥಳಿಸಿದ್ದು, ಒಬ್ಬ ಮಹಿಳಾ ಎಎಸ್‌ಐಗೆ ಹೊಟ್ಟೆಯ ಭಾಗಕ್ಕೆ ಕಚ್ಚಿದ್ದಾರೆ. ವಾಹನ ಹತ್ತಿಸುವಾಗ ಆಕೆಯೇ ಬಟ್ಟೆ ಬಿಚ್ಚಿಕೊಂಡಿದ್ದಾಳೆ. ಸಿಬ್ಬಂದಿ ಬಟ್ಟೆ ಹಾಕಿಸಿ ಬಂಧಿಸಿ, ನ್ಯಾಯಾಮಗ ಬಂಧನಕ್ಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸುಜಾತ ಹಂಡಿ ವಿರುದ್ಧ ಧಾರವಾಡದಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ೧೯ ಪ್ರಕರಣಗಳಿವೆ. ಕೇಶ್ವಾಪುರ, ಹಳೇ ಹುಬ್ಬಳ್ಳಿ, ವಿದ್ಯಾನಗರಗಳಲ್ಲಿ ಪ್ರಕರಣಗಳಿವೆ.
ಹನಿಟ್ರಾö್ಯಪ್, ಕಿಡ್ನಾಪ್ ಪ್ರಕರಣಗಳು ಈಕೆಯ ವಿರುದ್ಧ ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

