ಸುದ್ದಿ

ನಮ್ಮ ಮೆಟ್ರೋ ಪ್ರಯಾಣ ದರದಲ್ಲಿ ಮತ್ತೆ ಏರಿಕೆ: ಬೆಂಗಳೂರಿಗರಿಗೆ ಬರೆ ಎಳೆದ BMRCL !

Share It

ಬೆಂಗಳೂರು: ರಾಜಧಾನಿಯ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯ ಬಿಸಿ ಮುಟ್ಟಿಸಿದ್ದು, ಶೇ. 5 ರಷ್ಟು ದರ ಪರಿಷ್ಕರಣೆ ಮಾಡಿದೆ.

10 ರು. ಇದ್ದ ಮೊದಲ ಹಂತದ ಪ್ರಯಾಣ ದರ ಈಗ 11 ರು. ಆಗಲಿದೆ. ಕೊನೆಯ ಹಂತದ ಪ್ರಯಾಣ ದರ 90 ರು. ಬದಲಾಗಿ, ಇದೀಗ 95 ರು. ಆಗಲಿದೆ. ಪ್ರಯಾಣಿಕರ ಟಿಕೆಟ್ ಜತೆಗೆ ಸ್ಮಾರ್ಟ್ ಕಾರ್ಡ್ ಮತ್ತು ದಿನದ ಪಾಸ್ ಗಳ ಮೇಲೆಯೂ ಏರಿಕೆಯಾಗಿದೆ.

ದಿನದ ಪ್ರಯಾಣಿಕರ ಪಾಸ್ 300 ರು ನಿಂದ 313 ರು.ಗೆ ಏರಿಕೆಯಾಗಿದೆ. ಮೂರು ದಿನದ ಪಾಸ್ 600 ರು.ಇದ್ದದ್ದು, 628 ರು. ಆಗಲಿದೆ. ಐದು ದಿನದ ಪಾಸ್ 900 ರು.ಇದ್ದದ್ದು, 943 ರು. ಆಗಲಿದೆ.


Share It

You cannot copy content of this page