ರಾಜಧಾನಿ ದೆಹಲಿ ಶಾಲೆಗಳಲ್ಲಿ ಬಾಂಬ್ ಬೆದರಿಕೆ

Share It

ನವದೆಹಲಿ: ರಾಜ್ಯ ರಾಜಧಾನಿಯಲ್ಲಿ ನಾಲ್ಕು ತಿಂಗಳ ಹಿಂದೆ ಬಂದಿದ್ದ ರೀತಿಯಲ್ಲಿಯೇ ರಾಷ್ಟ್ರ ರಾಜಧಾನಿ ದೆಹಲಿಯ ೬೦ಕ್ಕೂ ಹೆಚ್ಚು ಶಾಲೆಗಳಿಗೆ ಬುಧವಾರ ಬೆಳಗ್ಗೆ ಬಾಂಬ್ ಬೆದರಿಕೆ ಬಂದಿದೆ.

ಮಯೂರ್ ವಿಹಾರ್‌ನಲ್ಲಿರುವ ಮದರ್ ಮೇರಿ ಶಾಲೆ, ದ್ವಾರಕಾದಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್, ಚಾಣಕ್ಯಪುರಿಯ ಸಂಸ್ಕೃತಿ ಶಾಲೆ, ವಸಂತ್ ಕುಂಜ್‌ನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್ ಮತ್ತು ಸಾಕೇತ್‌ನ ಅಮಿಟಿ ಸ್ಕೂಲ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಎಲ್ಲ ಶಾಲೆಗಳ ಇ-ಮೇಲ್‌ಗೆ ಬೆದರಿಕೆ ಪತ್ರಗಳನ್ನು ರವಾನೆ ಮಾಡಲಾಗಿದೆ. ತಮಗೆ ಬಂದಿರುವ ಇ-ಮೇಲ್‌ಗಳ ಬಗ್ಗೆ ಶಾಲೆ ಆಡಳಿತ ಮಂಡಳಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಎಲ್ಲ ಐದು ಶಾಲೆಗಳಲ್ಲಿ ತೀವ್ರ ಪರಿಶೀಲನೆ ಕೈಗೊಳ್ಳಲಾಗಿದೆ.

ಬಾಂಬ್ ಪತ್ತೆ ತಂಡ, ಬಾಂಬ್ ನಿಷ್ಕ್ರಿಯ ದಳ ಮತ್ತು ದೆಹಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಶಾಲೆಗೆ ಧಾವಿಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ನಾಲ್ಕೆöÊದು ತಿಂಗಳ ಹಿಂದೆ ಬೆಂಗಳೂರು ೨೦ ಕ್ಕೂ ಅಧಿಕ ಶಾಲೆಗಳಿಗೆ ಇದೇ ರೀತಿ ಬೆದರಿಕೆಯ ಇ-ಮೇಲ್ ಬಂದಿತ್ತು.

ಇದೀಗ ರಾಷ್ಟç ರಾಜಧಾನಿಯಲ್ಲಿ ಇಂತಹದ್ದೆ ಬೆದರಿಕೆ ಬಂದಿದೆ. ಬೆದರಿಕೆ ಇ-ಮೇಲ್ ಹಿಂದೆ ಇರುವ ವ್ಯಕ್ತಿಗಳನ್ನು ಕಂಡುಹಿಡಿದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಸೆಲ್ ಸೇರಿ ಭದ್ರತಾ ಸಂಸ್ಥೆಗಳು ಬಾಂಬ್ ಬೆದರಿಕೆ ಬಂದಿರುವ ಇ – ಮೇಲ್‌ನ ಮೂಲವನ್ನು ಹುಡುಕುತ್ತಿವೆ.


Share It

You May Have Missed

You cannot copy content of this page