ನವದೆಹಲಿ: ಇಂಡಿಗೋ ವಿಮಾನದಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲ ಆತಂಕದಿAದ ಹೊರಗೆ ಓಡಿಬಂದ ಘಟನೆ ದೆಹಲಿಯ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ದೆಹಲಿಯಿಂದ ವಾರಣಾಸಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂಬ ಪುಕಾರು ಹಬ್ಬಿತ್ತು. ಇದರಿಂದ ಗಾಬರಿಗೊಂಡ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿ ಓಡತೊಡಗಿದರು. ಗಾಬರಿಯಿಂದ ಕೆಲವರು ವಿಮಾನದ ಕಿಟಿಕಿಯಿಂದಲೇ ಇಳಿಯುವ ಪ್ರಯತ್ನ ನಡೆಸಿದರು. ವಿಮಾನ ಇನ್ನೂ ಟೇಕ್ ಆಫ್ ಆಗದ ಕಾರಣದಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎನ್ನಲಾಗಿದೆ.
ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ವೃದ್ಧ ಮಹಿಳೆಯೊಬ್ಬರು ಕಿಟಿಕಿಯಿಂದಲೇ ಇಳಿಯುವ ಪ್ರಯತ್ನ ನಡೆಸಿ, ಅವರಿಗೆ ಅನಿವಾರ್ಯವಾಗಿ ಗಗನಸಖಿ ಸಹಾಯ ಮಾಡುತ್ತಿರುವ ದೃಶ್ಯವೊಂದು ಸಆಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಯಾವುದೇ ಬಾಂಬ್ ಬೆದರಿಕೆ ಇನ್ನಿತರ ಸಂಗತಿಗಳನ್ನು ಭದ್ರತಾ ಸಿಬ್ಬಂದಿ ನಿರಾಕರಿಸಿದ್ದಾರೆ. ಪರಿಶೀಲನೆ ನಡಸಿ, ವಿಮಾನ ಮತ್ತೇ ತೆರಳು ಅವಕಾಶ ಮಾಡಿಕೊಡಲಾಯಿತು ಎನ್ನಲಾಗಿದೆ.