ನಮ್ಮ ಸುತ್ತಮುತ್ತಲೂ ಅನೇಕ ಬಗೆಯ ಸೂಕ್ಷ್ಮಾಣು ಜೀವಿಗಳಿರುತ್ತವೆ. ಅವುಗಳು ಯಾವಗ ಬೇಕಾದರೂ ನಮಗೆ ಹಾನಿಯನ್ನು ಉಂಡುಮಾಡಬಹುದು. ಅಂತದ್ದೇ ಒಂದು ಜೀವಿ ಈಗ ಕೇರಳದಲ್ಲಿ ಪತ್ತೆಯಾಗಿ 3 ತಿಂಗಳಲ್ಲೇ ಮೂವರನ್ನು ಬಲಿ ಪಡೆದಿದೆ . ಅಷ್ಟಕ್ಕೂ ಆ ಜೀವಿ ಯಾವುದು ಎಂಬುದನ್ನು ತಿಳಿಯೋಣ ಬನ್ನಿ.
ಆ ಜೀವಿಯೇ ಮೆದುಳು ಮೆಲ್ಲುವ ಅಮೀಬಾ. ಈ ಜೀವಿ ನಮ್ಮ ಮೂಗಿನ ಮೂಲಕ ನಮ್ಮ ಮೆದುಳನ್ನು ಸೇರಿ ಮೆದುಳನ್ನು ತಿನ್ನುವ ಕಾರ್ಯ ಮಾಡುತ್ತದೆ. ಶೇ 97 ರಷ್ಟು ಬದುಕುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳುತ್ತದಾರೆ. ಇವುಗಳು ನದಿ, ಹಳ್ಳಗಳು ಹಾಗೂ ಇತರ ನೀರಿನ ಮೂಲಗಳಲ್ಲಿ ಇರುತ್ತವೆ. ಇವು ಬಿಸಿ ನೀರಿನಲ್ಲಿಯೂ ಇರುತ್ತವೆ . ಮಕ್ಕಳ ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತವೆ. ಮೂಗಿಗೆ ಸೇರಿದರೆ ಮಾತ್ರ ಅಪಾಯ. ಹೊಟ್ಟೆ ಗೆ ಹೋದರೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ವೈದ್ಯರು.
ಲಕ್ಷಣಗಳು
ತಲೆ ನೋವು, ವಾಂತಿ, ಹೊಟ್ಟೆ ತೋಳಸುವುದು, ಜ್ವರ, ಬೆಳಕು ನೋಡಲು ಕಷ್ಟ ಆಗುವುದು , ಕುತ್ತಿಗೆ ಭಾರವಾಗುವುದು . ಒಮ್ಮೆ ಅಮೀಬಾ ಮೂಗಿಗೆ ಪ್ರವೇಶ ಪಡೆದರೆ 2 ರಿಂದ 15 ದಿನಗಳಲ್ಲಿ ಲಕ್ಷಣ ಕಾಣಿಸಿಕೊಳ್ಳುತ್ತದೆ. 10 ರಿಂದ 15 ದಿನಗಳಲ್ಲಿ ಸಾವಿಗೀಡಾಗಿತ್ತಾರೆ. ಇದರಿಂದ ಬದುಕಿ ಉಳಿದವರು ವಿರಳ.
ತಡೆಗಟ್ಟುವ ವಿಧಾನ.
ಒಮ್ಮೆ ಇದು ಮೆದುಳನ್ನು ಹೊಕ್ಕಿದರೆ ಯಾವುದೇ ರೀತಿಯಾಗಿ ತಡೆಯಲು ಸಾಧ್ಯವಿಲ್ಲ. ಇದಕ್ಕೆ ಬೇಕಾದ ಔಷಧಿಯು ಇಲ್ಲ. ಮುನ್ನೆಚ್ಚರಿಕೆ ಮಾಡಬಹುದು ಅಷ್ಟೇ.
ಕ್ಲೋರಿನ್ ಯುಕ್ತ ನೀರಿನಲ್ಲಿ ಮಾತ್ರ ಈಜನ್ನು ಮಾಡಿ.
ಕೆರೆಗಳು ಹಾಗೂ ಇತರ ನೀರಿನ ಮೂಲಗಳಲ್ಲಿ ತಳದ ಮಣ್ಣನ್ನು ಕದಡದೆ ಇರಿ.
ಮೇಲಿಂದ ಡೈವ್ ಮಾಡುವುದು ಸರಿಯಲ್ಲ.
ಮೂಗನ್ನು ಸ್ವಚ್ಚಗೊಳಿಸುವಾಗ ಮಾಮೂಲಿಯ ನೀರನ್ನು ಬಳಸದಿರಿ. ಶುದ್ದ ನೀರನು ಮಾತ್ರ ಬಳಕೆ ಮಾಡಿ.

