Breaking News : ಮಾಜಿ MLC ಡಿ.ಎಸ್. ವೀರಯ್ಯಗೆ ಬಿಗ್ ರಿಲೀಫ್: ಟ್ರಕ್ ಟರ್ಮಿನಲ್ ಪ್ರಕರಣ ರದ್ದು

Share It

ಬೆಂಗಳೂರು: ಮಾಜಿ ಪರಿಷತ್ ಸದಸ್ಯ ಡಿಎಸ್ ವೀರಯ್ಯ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅವರ ವಿರುದ್ಧ ದೇವರಾಜ್ ಅರಸು ಟ್ರಕ್ ಟರ್ಮಿನಲ್ ಹಗರಣದಲ್ಲಿ ದಾಖಲಾಗಿದ್ದಂತ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ದೇವರಾಜ ಅರಸು ಟ್ರಕ್ ಟರ್ಮಿನಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಕೋಟ್ಯಾಂತರ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ ಎಸ್ ವೀರಯ್ಯ ಅವರನ್ನು CID ಅಧಿಕಾರಿಗಳು ಜುಲೈ.12, 2024ರಲ್ಲಿ ಬಂಧಿಸಿದ್ದರು.

ಡಿಎಸ್ ವೀರಯ್ಯ ಅಧ್ಯಕ್ಷರಾಗಿದ್ದ ಕಾಲದಲ್ಲಿ ಸುಮಾರು 47 ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪದ ಅವರ ಮೇಲಿತ್ತು. ಈ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಮಾಜಿ ಸಚಿವ ಡಿಎಸ್ ವೀರಯ್ಯ ಅವರನ್ನು ಜುಲೈ.12, 2024ರಂದು ಬಂಧಿಸಿದ್ದರು. ಆ ಬಳಿಕ ಕೋರ್ಟ್ ಮೊರೆ ಹೋಗಿದ್ದಂತ ಡಿಎಸ್ ವೀರಯ್ಯ ಅವರಿಗೆ ಜಾಮೀನು ಮಂಜೂರಾಗಿತ್ತು.

ಜಾಮೀನಿನಿಂದ ಹೊರಬಂದಿದ್ದಂತ ಮಾಜಿ ಪರಿಷತ್ ಸದಸ್ಯ ಡಿಎಸ್ ವೀರಯ್ಯ ಅವರು ದೇವರಾಜು ಅರಸು ಟ್ರಕ್ ಟರ್ಮಿನಲ್ ಹಗರಣದಲ್ಲಿ ತನ್ನ ಪಾತ್ರ ಯಾವುದು ಇಲ್ಲ. ನನ್ನ ಬಂಧನದ ವೇಳೆಯಲ್ಲಿ ಕಾನೂನು ನಿಯಮಗಳನ್ನು ಕೂಡ ಪಾಲಿಸಿಲ್ಲ. ಹೀಗಾಗಿ ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರನ್ನು ಒಳಗೊಂಡ ನ್ಯಾಯಪೀಠವು, ವಾದ ಪ್ರತಿವಾದವನ್ನು ಆಲಿಸಿ, ಮಾಜಿ ಎಂಎಲ್ಸಿ ಡಿ.ಎಸ್ ವೀರಯ್ಯ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ. ಈ ಮೂಲಕ ಮಾಜಿ ಪರಿಷತ್ ಸದಸ್ಯ ಡಿ.ಎಸ್ ವೀರಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ.


Share It

You May Have Missed

You cannot copy content of this page