ಕಲಬುರಗಿ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಬೆಂಕಿ ಹತ್ತಿಕೊಂಡ ಪರಿಣಾಮ ಓರ್ವ ಬೈಕ್ ಸವಾರ ಸಜೀವ ದಹನವಾದ ಆಘಾತಕಾರಿ ಘಟನೆ ತಾಲೂಕಿನ ಕಾಳಗಿ ಪಟ್ಟಣದಿಂದ ಕೊಡದೂರ್ ಗ್ರಾಮಕ್ಕೆ ಸಾಗುವ ಮಾರ್ಗದಲ್ಲಿ ಶನಿವಾರ ನಡೆದಿದೆ.
ಮೃತರನ್ನು ದಶರಥ್ ಮಡಿವಾಳ(28) ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡ ಇನ್ನೊರ್ವ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಬೈಕ್ ಢಿಕ್ಕಿ ಹೊಡೆದ ರಭಸಕ್ಕೆ ದಶರಥ್ ಅವರ ಬೈಕ್ ಕೆಳಗೆ ಬಿದ್ದು, ಟ್ಯಾಂಕ್ ನಿಂದ ಪೆಟ್ರೋಲ್ ಹರಿದ ಪರಿಣಾಮವಾಗಿ ಬೈಕ್ ಗೆ ಬೆಂಕಿ ಹತ್ತಿಕೊಂಡಿತು ಎಂದು ತಿಳಿದುಬಂದಿದೆ. ಈ ಕುರಿತು ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.