ಜಪಾನ್:ಶನಿವಾರ ಮಧ್ಯಾಹ್ನ, ಜಪಾನಿನ ಹೊಕ್ಕೈಡೋ ಪ್ರದೇಶದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್‌ನ ಹವಾಮಾನ ಇಲಾಖೆ ತಿಳಿಸಿದೆ. ಭೂಕಂಪನವು 20 ಕಿಲೋಮೀಟರ್ (12 ಮೈಲು) ಆಳದಲ್ಲಿ ಸಂಭವಿಸಿದೆ.
ಭೂಕಂಪನದ ಕೇಂದ್ರೀಯ ಬಿಂದುವು ಹೊಕ್ಕೈಡೋನ ಪೂರ್ವ ಕರಾವಳಿಯಿಂದ ಹೊರಭಾಗದಲ್ಲಿದೆ ಎಂದು ಇಲಾಖೆ ತಿಳಿಸಿದ್ದು, ಈ ಭೂಕಂಪನಕ್ಕೆ ಸಂಬಂಧಿಸಿದಂತೆ ಯಾವುದೇ ಸುನಾಮಿ ಎಚ್ಚರಿಕೆ ಹೊರಡಿಸಲಾಗಿಲ್ಲವೆಂದು ತಿಳಿಸಿದೆ.